ನವದೆಹಲಿ: ದೇಶದಲ್ಲಿ ಕೋವಿಡ್ ಆರ್ಭಟ ಹೆಚ್ಚಾದ ಬೆನ್ನಲ್ಲೇ ಇಂದು ಪ್ರಧಾನಿ ಮೋದಿ ಕೊರೊನಾ ಸ್ಥಿತಿಗತಿಯ ಬಗ್ಗೆ ಎಲ್ಲಾ ರಾಜ್ಯದ ಸಿಎಂಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಹತ್ವದ ಸೂಚನೆ ನೀಡಿದ್ದಾರೆ. ಲಾಕ್ ಡೌನ್ ಅಸ್ತ್ರಕ್ಕಿಂತ ಮೈಕ್ರೋಕಂಟೈನ್ಮೆಂಟ್ ಜೋನ್, ಹೋಮ್ ಐಸೋಲೇಶನ್, ಟ್ರಾಕ್ ಹಾಗೂ ಟ್ರೀಟ್ಮೆಂಟ್ ಗೆ ಹೆಚ್ಚಿನ ಆದ್ಯತೆ ನೀಡುವಂತೆ ಮೋದಿ ಸೂಚಿಸಿದ್ದಾರೆ.
ಎಲ್ಲಾ ಮುಖ್ಯಮಂತ್ರಿಗಳ ಮಾತು ಕೇಳಿದ ನನಗೆ, ದೇಶ ಈ ಬಾರಿ ಕೊರೊನಾ ಆತಂಕವನ್ನೂ ಸಂಪೂರ್ಣವಾಗಿ ಗೆಲ್ಲಲಿದೆ ಎನ್ನುವ ವಿಶ್ವಾಸವಿದೆ ಎಂದರು. ಅಮೆರಿಕದಂತ ದೇಶದಲ್ಲಿ 14 ಲಕ್ಷ ಕೇಸ್ ಗಳು ಪತ್ತೆಯಾಗುತ್ತಿದೆ. ಆದರೆ ನಮ್ಮ ದೇಶದಲ್ಲಿ ವೈದ್ಯರು, ವಿಜ್ಞನಿಗಳು, ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿದೆ. ಹಬ್ಬಗಳಲ್ಲಿ ನಾವು ಕೊರೊನಾ ಮಾರ್ಗಸೂಚಿ ಪಾಲನೆಯಲ್ಲಿ ಹಿಂದೇ ಬೀಳಬಾರದು. ನಾವು ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ, ಮುಂಜಾಗ್ರತೆ ಅತೀ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಭಾರತ ವಯಸ್ಕರಿಗೆ ಶೇಕಡಾ 92 ರಷ್ಟು ಮೊದಲ ಡೋಸ್ ನೀಡಲಾಗಿದೆ. ನಮ್ಮ ಲಸಿಕಾ ಅಭಿಯಾನ ಒಂದು ವರ್ಷ ಪೂರೈಸಲು ಇನ್ನು 3 ದಿನ ಮಾತ್ರ ಬಾಕಿ ಇದೆ. ದೇಶ ಕಳೆದ ಒಂದು ವರ್ಷದಲ್ಲಿ ಲಸಿಕಾ ಅಭಿಯಾನದ ಮೂಲಕ ಸಂಪೂರ್ಣ ಜನತೆಗೆ ಲಸಿಕೆ ಹಾಕುವ ಮಹತ್ವ ಕಾರ್ಯದಲ್ಲಿ ತೊಡಗಿದೆ ಎಂದರು. ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಆರ್ಥಿಕತ ಸ್ಥಿತಿಗತಿ, ರಾಜ್ಯದ ಜನರ ಸ್ಥಿತಿಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
ಲಾಕ್ ಡೌನ್ ಮಾನದಂಡವಲ್ಲ. ಇದರ ಬದಲು ಮೈಕ್ರೋಕಂಟೈನ್ಮೆಂಟ್ ಜೋನ್, ಹೋಮ್ ಐಸೋಲೇಶನ್, ಟ್ರಾಕಿಂಗ್ ಹಾಗೂ ಚಿಕಿತ್ಸೆ ವ್ಯವಸ್ಥೆ ಹೆಚ್ಚಿಸುವುದು ಸೂಕ್ತ ಎಂದು ಹೇಳಿದ್ದಾರೆ. ದೇಶದ ಪರಂಪರಾಗತವಾಗಿ ಬಂದಿರುವ ಆರ್ಯುವೇದ ಔಷಧಿ ಕೊರೊನಾ ನೇರ ಮದ್ದಲ್ಲ. ಆದರೆ ಆರ್ಯುವೇದ ವಿಧಾನ ಮಾನವನ ರೋಗನಿರೋಧಕ ಶಕ್ತಿ ಹೆಚ್ಚಿಸಲಿದೆ. ಹೀಗಾಗಿ ಈ ಕುರಿತು ಗಮನವಹಿಸುವುದು ಸೂಕ್ತ.
ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕೊರೊನಾ ಕುರಿತ ಸಂಪೂರ್ಣ ಮಾಹಿತಿಯನ್ನು ಪ್ರಧಾನಿಗೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಮಾರ್ಗಸೂಚಿಗಳನ್ನು ಕಾಪಾಡಿಕೊಳ್ಳುವುದು ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ.
15 ರಿಂದ 18 ವರ್ಷದೊಳಗಿನ ಮಕ್ಕಳು, ಬೂಸ್ಟರ್ ಡೋಸ್ ಸೇರಿದಂತೆ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ಲಸಿಕೆಯ ಅಗತ್ಯವಿದೆ. ಹೀಗಾಗಿ ಯಾವುದೇ ರಾಜ್ಯಗಳಿಗೆ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
PublicNext
13/01/2022 07:35 pm