ಬೆಂಗಳೂರು: ಅದ್ದೂರಿಯಾಗಿ ಹೊಸ ವರ್ಷಾಚರಣೆ ನಡೆಸಲು ಈ ಬಾರಿ ಅವಕಾಶವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನ್ಯೂ ಇಯರ್ ಸೆಲೆಬ್ರೆಷನ್ ಗೆ ಬ್ರೇಕ್ ಹಾಕುವ ಸುಳಿವು ನೀಡಿದ್ದಾರೆ. ಒಮಿಕ್ರಾನ್ ಹೊಸ ವೈರಾಣು ಪತ್ತೆ ಹಿನ್ನೆಲೆಯಲ್ಲಿ ಕೊವೀಡ್ ಮಾರ್ಗ ಸೂಚಿ ಪಾಲನೆ ಕಡ್ಡಾಯ ಎಂದರು.
ರಾಜ್ಯ ಸರ್ಕಾರದ ಮಟ್ಟದಲ್ಲಿ ನ್ಯೂ ಇಯರ್ ಆಚರಣೆಗೆ ಅವಕಾಶ ನೀಡಬೇಕಾ ಅಥವಾ ಬೇಡವೇ ಎಂಬುದರ ಚರ್ಚೆ ನಡೆಯುತ್ತಿದೆ. ಇದುವರೆಗೂ ಯಾವುದೇ ಅನುಮತಿ ಕೋರಿ ಬಿಬಿಎಂಪಿ ಸಾರ್ವಜನಿಕರಿಂದ ಮನವಿ ಬಂದಿಲ್ಲ.
ಸರ್ಕಾರದ ನಿರ್ಧಾರವನ್ನು ಪರಿಪಾಲನೆ ಮಾಡುತ್ತೇವೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸಿದ್ದಾರೆ.
PublicNext
11/12/2021 01:56 pm