ಬೆಂಗಳೂರು : ರಾಜ್ಯದಲ್ಲಿ ಒಮ್ರಿಕಾನ್ ಆತಂಕದಿಂದಾಗಿ ಕೆಲವು ರೂಲ್ಸ್ ಗಳನ್ನು ಜಾರಿ ಮಾಡಲಾಗಿದೆ. ಇಂದು ನಡೆದ ಸಿಎಂ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಆರ್.ಅಶೋಕ್ ಮದುವೆಗೆ 500 ಜನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.
2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್,ಥೇಟರ್ , ಶಾಲೆಗೆ ಎಂಟ್ರಿ
ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಎಡರಡು ಡೋಸ್ ಲಸಿಕೆ ಕಡ್ಡಾಯ
ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ರೂಲ್ಸ್ ಜಾರಿ ಮಾಡಲಾಗಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ಪ್ರತ್ಯೇಕ ಮಾರ್ಗ ಸೂಚಿ ಹೊರಡಿಸಲು ನಿರ್ದೇಶನ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಮತ್ತು ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ವಿಮಾನ ನಿಲ್ದಾಣದಿಂದ ಹೊರ ಬಿಡಲಾಗುತ್ತದೆ.
ಪ್ರತಿ ನಿತ್ಯ 1 ಲಕ್ಷ ಕೊವೀಡ್ ಟೆಸ್ಟ್ ಮಾಡಬೇಕು. ಕೊವೀಡ್, ಐಸಿಯು ಬೆಡ್ ಸಿದ್ದ ಪಡಿಸಲಾಗುತ್ತಿದೆ. ರಾಜ್ಯಾದ್ಯಾಂತ ಕಂಟ್ರೋಲ್ ರೂಂ ಮತ್ತೆ ಆರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ.
ಸಭೆಯಲ್ಲಿ ಹಿರಿಯ ಸಚಿವರು, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದರು.
PublicNext
03/12/2021 03:47 pm