ಕಲಬುರುಗಿ: ರಾಜ್ಯಕ್ಕೂ ಒಮೆಕ್ರಾನ್ ಒಕ್ಕರಿಸಿದ ಹಿನ್ನಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.ಜಿಲ್ಲೆಯಲ್ಲಿ ಐದು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಮಹಾರಾಷ್ಟ್ರದ ಗಡಿಗಳಲ್ಲಂತೂ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಕೋವಿಡ್ ನೆಗೆಟಿವ್ ರಿಪೋರ್ಟ ಇದ್ದರಷ್ಟೇ ಜಿಲ್ಲೆಯೊಳಗೆ ಎಂಟ್ರಿಗೆ ಅವಕಾಶ ನೀಡಲಾಗುತ್ತದೆ.
ನೆಗೆಟಿವ್ ರಿಪೋರ್ಟ ಇಲ್ಲವೇ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ಅನ್ನು ಜಿಲ್ಲಾಡಳಿತ ಕಡ್ಡಾಯ ಮಾಡಿದೆ.ಜಿಲ್ಲೆಯ ಆಳಂದ ತಾಲೂಕಿನ ಹಿರೊಳ್ಳಿ ಬಾರ್ಡರನಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಿದ್ದು, ಮಹಾರಾಷ್ಟ್ರದಿಂದ ಬರುವ ಪ್ರತಿ ವಾಹನ ತಪಾಸಣೆ ಮಾಡಿಯೇ ಒಳ ಬಿಡಲಾಗುತ್ತಿದೆ.ಪೊಲೀಸ್, ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು 24×7 ತಪಾಸಣೆ ಮಾಡಿ ವೈರಸ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.
PublicNext
03/12/2021 11:40 am