ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ 70 ಕೋಟಿ ಲಸಿಕೆ ವಿತರಣೆಯ ದಾಖಲೆ

ನವದೆಹಲಿ: ಭಾರತವು ಕೋವಿಡ್ ಲಸಿಕೆ ವಿತರಣೆಯಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಕಳೆದ ಕೇವಲ 13 ದಿನಗಳಲ್ಲಿ 10 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ಮಂಗಳವಾರದವರೆಗೂ 70 ಕೋಟಿ ಡೋಸ್ ವಿತರಣೆಯ ಹೊಸ ಮೈಲುಗಲ್ಲು ಸ್ಥಾಪಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ, ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆಯು ತನ್ನ ಗೆಲುವಿನ ಹಾದಿಯಲ್ಲಿದೆ. ಈ ಸಾಧನೆಗೆ ಕಾರಣರಾದ ದೇಶ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಇದುವರೆಗೆ 53.96 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 16.67 ಕೋಟಿ ಜನರಿಗೆ 2ನೇ ಡೋಸ್‌ ವಿತರಿಸಲಾಗಿದೆ.

ಮೊದಲ 10 ಕೋಟಿ ಡೋಸ್ ವಿತರಿಸಲು 85 ದಿನ ಬೇಕಾಗಿತ್ತು. 20 ಕೋಟಿಯನ್ನು 45 ದಿನಗಳಲ್ಲಿ, 30 ಕೋಟಿ ತಲುಪಲು 29 ದಿನ, 40 ಕೋಟಿ ತಲುಪಲು 24 ದಿನ, 50 ಕೋಟಿ ತಲುಪಲು 20 ದಿನ, 60 ಕೋಟಿಗೆ 19 ದಿನ ಮತ್ತು 70 ಕೋಟಿಯನ್ನು ಕೇವಲ 13 ದಿನಗಳಲ್ಲಿ ತಲುಪಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Edited By : Vijay Kumar
PublicNext

PublicNext

08/09/2021 02:26 pm

Cinque Terre

46.85 K

Cinque Terre

0

ಸಂಬಂಧಿತ ಸುದ್ದಿ