ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರನಾ ಮೂರನೇ ಅಲೆ ಆರ್ಭಟಿಸುತ್ತಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಸದ್ಯ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ರಾಜಧಾನಿಯಲ್ಲಿ ಡೆಲ್ಟಾ ಸೋಂಕು ಪತ್ತೆಯಾಗುವುದರ ಜೊತೆಗೆ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.
ಇದೇ ಹಿನ್ನಲೆ ಈ ಕುರಿತು ಕೈ ಗೊಳ್ಳಬಹುದಾದ ಕಟ್ಟು ನಿಟ್ಟಿನ ಕ್ರಮದ ಬಗ್ಗೆ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಬಿಬಿಎಂಪಿ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚಿವರು, ಆಗಸ್ಟ್ 15ರ ಬಳಿಕ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಜಾರಿಗೆ ತರಲಾಗುವುದು. ಸ್ವಾತಂತ್ರ್ಯ ದಿನದ ವರೆಗೂ ಪ್ರಸ್ತುತ ಇರುವ ನಿಯಮ ಜಾರಿಯಲ್ಲಿರಲಿದೆ. ಆ ಬಳಿಕ ಟಫ್ ರೂಲ್ಸ್ ಜಾರಿಯಾಗಲಿದೆ ಎಂದರು.
ದೇವಸ್ಥಾನ ಲಾಕ್ ಆಗುವ ಸಾಧ್ಯತೆ
ಸೋಂಕು ಹೆಚ್ಚಳದ ನಡುವೆ ಶ್ರಾವಣ ಕೂಡ ಆರಂಭವಾಗಿದ್ದು ಹಬ್ಬಗಳ ಸಾಲಿನ ಹಿನ್ನಲೆ ಭಕ್ತರು ದೇವಸ್ಥಾನಕ್ಕೆ ಹರಿದು ಬರಲಿದ್ದಾರೆ. ಈ ಹಿನ್ನೆಲೆ ಆಗಸ್ಟ್ 15 ನಂತರ ದೇವಸ್ಥಾನದ ಮೇಲೆ ನಿರ್ಬಂಧ ಹೇರುವ ಚರ್ಚೆ ಆಗಿದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ 2%ಕ್ಕಿಂತ ಹೆಚ್ಚಾದರೆ. ಮಾತ್ರ ವೀಕೆಂಡ್ ಕರ್ಫ್ಯೂ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಅದುವರೆಗೆ ನಗರದಲ್ಲಿ ವೀಕೆಂಡ್ ಕರ್ಫ್ಯೂ ಇಲ್ಲ ಎಂದು ಸ್ಪಷ್ಟಣೆ ನೀಡಿದರು.
PublicNext
09/08/2021 03:24 pm