ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ನೈಟ್​ ಕರ್ಫ್ಯೂ: ಅನಗತ್ಯವಾಗಿ ಓಡಾಡಿದ್ರೆ ಬೀಳುತ್ತೆ ಕೇಸ್- ಯಾವುದಕ್ಕೆಲ್ಲ ವಿನಾಯಿತಿ?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಟ್​ ಕರ್ಫ್ಯೂ ಘೋಷಿಸಲಾಗಿದೆ. ಇಂದಿನಿಂದ ನೈಟ್​ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 10 ಗಂಟೆ ನಂತರ ಅನಗತ್ಯವಾಗಿ ರಸ್ತೆಗಿಳಿಯುವ ಸಾರ್ವಜನಿಕರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮತ್ತು ಪೊಲೀಸ್​ ಇಲಾಖೆ ತಿಳಿಸಿದೆ.

ಪೊಲೀಸರು, ಮಾರ್ಷಲ್ಸ್ ನೇತೃತ್ವದಲ್ಲಿ ಇಂದಿನಿಂದ ಕಾರ್ಯಾಚರಣೆ ಆರಂಭವಾಗುತ್ತಿದೆ. ಆದ್ದರಿಂದ ಇಂದು (ಮಂಗಳವಾರ- ಜುಲೈ 3) ರಾತ್ರಿ 10 ಗಂಟೆಯಿಂದ ರಾತ್ರಿ ಕರ್ಫ್ಯೂ ಶುರುವಾಗಲಿದೆ. ಪ್ರತಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಈ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಗತ್ಯ ವಸ್ತುಗಳ ಸರಬರಾಜು, ಮತ್ತು ವೈದ್ಯಕೀಯ ಸೇವೆಗಳು ಹೊರತುಪಡಿಸಿ ಇನ್ನುಳಿದ ಎಲ್ಲಾ ವ್ಯಾಪಾರ ಹಾಗೂ ವಹಿವಾಟುಗಳ ನಿರ್ಬಂಧವನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಸಜ್ಜುಗೊಂಡಿದೆ.

ಯಾವುದಕ್ಕೆಲ್ಲಾ ವಿನಾಯಿತಿ?

* ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು

* ರೋಗಿಗಳನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶ

* ಯಾವುದೇ ಕಂಪನಿ ಹಾಗೂ ಕೈಗಾರಿಕಾ ಉದ್ಯೋಗಿಗಳು (ಕಡ್ಡಾಯವಾಗಿ ಪಾಸ್ ಹೊಂದಿರಬೇಕು)

* ಐಡಿಕಾರ್ಡ್ ಗಳನ್ನ ಹೊಂದಿರುವ ಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸ್ ವರ್ಕರ್ಸ್

* ತುರ್ತು ವೈದ್ಯಕೀಯ ಹಾಗೂ ಅಗತ್ಯ ಸರಬರಾಜು ವಾಹನಗಳಿಗೆ ಅವಕಾಶ

* ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶ

* ವಿಮಾನ, ರೈಲ್ವೆ ಪ್ರಯಾಣಕ್ಕೆ ಸಂಬಂಧಿತ ಓಡಾಟಕ್ಕೆ ಸೂಕ್ತ ಮಾಹಿತಿ‌ ಒದಗಿಸಬೇಕು

Edited By : Vijay Kumar
PublicNext

PublicNext

03/08/2021 04:02 pm

Cinque Terre

64.34 K

Cinque Terre

18

ಸಂಬಂಧಿತ ಸುದ್ದಿ