ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಹೊಸ ಸ್ವರೂಪದ COVID-19 ವೈರಸ್ ಹರಡುತ್ತದೆ ಎಂದು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸುವಂತೆ ಸೂಚಿಸಲಾಗಿದೆ.
ಈಗಾಗಲೇ ನೈಟ್ ಕರ್ಫ್ಯೂ ವಿಚಾರದಲ್ಲಿ ನಗೆಪಾಟಲಿಗೆ ಈಡಾಗಿದ್ದ ರಾಜ್ಯ ಸರ್ಕಾರ ಹೊಸ ವರ್ಷವನ್ನು ಸಾರ್ವಜನಿಕವಾಗಿ ಆಚರಿಸದಂತೆ ಸೂಚಿಸಿ ಡಿಸೆಂಬರ್ 17ರಂದೇ ಮಾರ್ಗಸೂಚಿ ಪ್ರಕಟಿಸಿದೆ.
ಆದರೆ ಈ ನಿಯಮಗಳನ್ನಾದ್ರೂ ಸರಿಯಾಗಿ ಜಾರಿಗೆ ತರ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ.
ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಜಾರಿ ಮಾಡುವಂತೆ ಪೊಲೀಸ್ ಆಯಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಒಂದೆರಡು ದಿನಗಳಲ್ಲಿ ಪೊಲೀಸ್ ಇಲಾಖೆ ಬೆಂಗಳೂರಿಗೆ ಸೀಮಿತವಾಗಿರುವ ಪ್ರತ್ಯೇಕ ರೂಲ್ಸ್ ಪ್ರಕಟಿಸಲಿದೆ.
ಬೆಂಗಳೂರಿಗೆ ‘ನ್ಯೂ’ ರೂಲ್ಸ್ – ಏನಿರಬಹುದು?
* ಹೊಸ ವರ್ಷದ ದಿನ ಎಲ್ಲೂ ಮೋಜು ಮಸ್ತಿಗೆ ಅವಕಾಶವಿಲ್ಲ.
* ಡಿಸೆಂಬರ್ 31, ಜನವರಿ 1ರಂದು ಬೆಂಗಳೂರಿನಲ್ಲಿ ಟಫ್ ರೂಲ್ಸ್.
* ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ಸ್ಟ್ರೀಟ್ ನಲ್ಲಿ ಹೊಸ ವರ್ಷಕ್ಕಿಲ್ಲ ಅನುಮತಿ.
* ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಜನರು ಬರದಂತೆ ತಡೆಯಲು ಪ್ಲಾನ್.
* ಕ್ಲಬ್, ಪಬ್, ರೆಸ್ಟೋರೆಂಟ್ ಗಳಲ್ಲಿ ಡಿಜೆ, ಡ್ಯಾನ್ಸ್, ಪಾರ್ಟಿ ನಿಷೇಧ.
* ಪಬ್, ಬಾರ್ & ರೆಸ್ಟೊರೆಂಟ್ ಗಳಲ್ಲಿ ಶೇ.50ರಷ್ಟು ಮಂದಿಗಷ್ಟೇ ಪರ್ಮಿಷನ್.
* ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಪಬ್ ಗಳು ರಾತ್ರಿ 11ಕ್ಕೆ ಬಂದ್.
* ಡಿಸೆಂಬರ್ 31ರ ಸಂಜೆ 6ರಿಂದಲೇ ಫ್ಲೈ ಓವರ್ ಬಂದ್ ಮಾಡಲು ಪ್ಲಾನ್
* ಕಾನೂನು ಉಲ್ಲಂಘಿಸಿ ಸೆಲೆಬ್ರೇಷನ್ ಮಾಡುವವರ ಮೇಲೆ ಖಾಕಿ ನಿಗಾ.
* ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ.. ಸಿಕ್ಕಿಬಿದ್ದರೇ ವಾಹನ ಸೀಜ್, ಕೇಸ್.
PublicNext
25/12/2020 10:43 pm