ನವದೆಹಲಿ:ಕೇಂದ್ರ ಸರ್ಕಾರ ಮಕ್ಕಳ ಮಧ್ಯಾಹ್ನದ ಬಿಸಿಯೂಟದಲ್ಲಿ ರಾಗಿ ನೀಡಲು ಚಿಂತನೆ ನಡೆಸಿದೆ. ಅತಿ ಹೆಚ್ಚು ಪೌಷ್ಟಿಕಾಂಶ ರಾಗಿಯಲ್ಲಿರೋದ್ರಿಂದಲೇ ಮಕ್ಕಳಿಗೆ ಇದು ಸೂಕ್ತ ಅನ್ನೋ ಕಾರಣಕ್ಕೆ ಇದನ್ನ ಕೊಡಲು ಯೋಚಿಸುತ್ತಿದೆ. ಆದರೆ ಇನ್ನೂ ಯಾವುದೂ ಫೈನಲ್ ಆಗಿಲ್ಲ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 38 ರಷ್ಟು ಐದು ವರ್ಷದೊಳಗಿನ ಮಕ್ಕಳು ಕುಂಠಿತರಾಗಿದ್ದಾರೆ. ಶೇಕಡ 59 ರಷ್ಟು ಮಕ್ಕಳು ರಕ್ತಹೀನತೆಯಿಂದಲೇ ಬಳಲುತ್ತಿದ್ದಾರೆ. ಅದಕ್ಕೆನೆ ಭಾರತ ಸರ್ಕಾರವು ಅಪೌಷ್ಟಿಕತೆ ಕಡಿಮೆ ಮಾಡಲು ಮಕ್ಕಳ
ರಾಗಿ ಸೇವನೆಗೆ ಒತ್ತುಕೊಡಲು ಚಿಂತನೆ ನಡೆಸುತ್ತಿದೆ. ಆದರೆ ಇದು ಯಾವಗ ಜಾರಿಗೆ ಬರುತ್ತದೆ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.
PublicNext
04/11/2021 03:53 pm