ಬೆಂಗಳೂರು: ರಾಜ್ಯದ ವೈದ್ಯರಿಗೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಈಗ 2,500 ವೈದ್ಯರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತುಕೊಳ್ಳಬೇಕಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದಾದ ವೈದ್ಯರಿಗೆ ಆರೋಗ್ಯ ಇಲಾಖೆ ಪದೇ ಪದೇ ಕೌನ್ಸಲಿಂಗ್ ಮುಂದೂಡುತ್ತಲೇ ಇದೆ. ಈ ಒಂದು ಕಾರಣಕ್ಕೇನೆ ಎಂಬಿಬಿಎಸ್,ಎಂಎಸ್,ಎಂಡಿ ಪಾಸದಾವರಿಗೆ ರಾಜ್ಯದಲ್ಲಿ ಸದ್ಯ ಕೆಲಸವೇ ಇಲ್ಲ. ಸ್ಪೆಷಲಿಸ್ಟ್ ವೈದ್ಯರೂ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿಯೇ ಕೂತು ಬಿಟ್ಟಿದ್ದಾರೆ.
ಕೆಲವರ ನೋಂದಣಿ ಆಗಿಯೇ ಇಲ್ಲ ಎಂದು ನೆಪವೊಡ್ಡಿ ಕೌನ್ಸಲಿಂಗ್ ಮುಂದೂಡಿದ್ದಾರೆ ಎಂಬ ಆರೋಪ ಈಗ ಈ ವಿಷಯದಲ್ಲಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲಿಯೇ ಕೇರಳ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿಯೇ ವೈದ್ಯರನ್ನ ನೇಮಿಸಬೇಕು ಅನ್ನೋ ಕೂಗು ಕೇಳಿ ಬರ್ತಾಯಿದೆ.
ಈ ಮಾದರಿಯಲ್ಲಿ ಮೆರಿಟ್ನಲ್ಲಿ ವೈದ್ಯಕೀಯ ಸೀಟ್ ಪಡೆಯೋ ವಿದ್ಯಾರ್ಥಿಗಳಿಗೆ ಬಾಂಡ್ ಇರುತ್ತದೆ. ಬಾಂಡ್ ಪ್ರಕಾರ ವೈದ್ಯಕೀಯ ಅಭ್ಯಾಸ ಮುಗಿಯೋದೇ ತಡ, ಅವರೆಲ್ಲ ಸರ್ಕಾರಿ ಸಲ್ಲಿಸಲೇಬೇಕು. ಹೀಗೆ ಕೊನೆ ವರ್ಷದಲ್ಲಿರೋ ವಿದ್ಯಾರ್ಥಿಗಳಿಗೆ ಕೆಲಸ ಕೂಡ ಸಿಕ್ಕು ಬಿಡುತ್ತದೆ. ಆದರೆ, ಕರ್ನಾಟಕದಲ್ಲಿ ಈ ಮಾದರಿಯಲ್ಲಿ ವೈದ್ಯರ ನೇಮಕಾತಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ.
PublicNext
30/07/2022 09:41 am