ಬೆಂಗಳೂರು: ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವರು ಸಭೆ ಕರೆದಿದ್ದು, ಸಭೆಗೂ ಮುನ್ನಾ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಾಲಾ ಕಾಲೇಜು ಬಂದ್ ಆಗುತ್ತಾ? ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅವರು ಹೇಳುವ ಪ್ರಕಾರ ಸದ್ಯದ ಮಟ್ಟಿಗೆ ಯಾವ ಶಾಲಾ ಕಾಲೇಜಿಗೆ ರಜೆ ಘೋಷಿಸಲ್ಲ ಹಾಗೂ ಪರಿಸ್ಥಿತಿ ನೋಡಿಕೊಂಡು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿ ಎಂದು ಸೂಚಿಸಿದ್ದಾರೆ.
ಕೊರೋನಾ ಕೇಸ್ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು ನಗರ, ಬೆಳಗಾವಿ , ಮೈಸೂರು ಜಿಲ್ಲೆಗಳಲ್ಲಿ ಶಾಲೆ ಬಂದ್ ಆಗಿದೆ.ರಾಜ್ಯದಲ್ಲಿ ಪ್ರತಿದಿನ ಕೊರೋನಾ ಕೇಸ್ ಜಾಸ್ತಿ ಆಗ್ತಾ ಇದೆ, ನಿನ್ನೆ ಸಿಎಂ ಮೀಟಿಂಗ್ ಸಹ ಮಾಡಿದ್ದಾರೆ ಪಾಸಿಟಿವಿಟಿ ರೇಟ್ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಕಳೆದ ಒಂದೂವರೆ ವರ್ಷದಲ್ಲಿ ಮಕ್ಕಳ ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ ಈ ಭಾರಿ ಶಾಲೆಗಳನ್ನ ಬಂದ್ ಮಾಡದೇ ಶಾಲೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.
ತಾಲೂಕು ಮಟ್ಟದ ರಿವ್ಯೂ ಮೀಟಿಂಗ್ ಮಾಡಿದಾಗ ತುಂಬಾ ತಾಲೂಕು ಗಳಲ್ಲಿ ಪಾಸಿಟಿವಿಟಿ ರೇಟ್ ತುಂಬಾ ಕಡಿಮೆ ಇದೆ
0% 12 ತಾಲೂಕುಗಳಲ್ಲಿ ಪಾಸಿಟಿವಿಟ್ ರೇಟ್ ಇದೆ ಶಾಲೆಗಳಿಗೆ ರಜೆ ಕೊಡುವ ನಿರ್ಧಾರ ಅಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಂಡು ಎಲ್ಲಿ ಎಲ್ಲಿ ಶಾಲೆಗಳನ್ನ ನಡೆಸಲು ಸಾಧ್ಯವೂ ಅಲ್ಲಿ ಶಾಲೆ ಒಪನ್ ಇರಲಿದೆ ಬೆಂಗಳೂರು ನಗರದಲ್ಲಿ ನಿತ್ಯ 10 ಸಾವಿರ ಗಡಿ ದಾಟಿದೆ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ತರಗತಿ ನಡೆಸಲಾಗುತ್ತಿದೆ ಎಂದರು.
PublicNext
12/01/2022 01:49 pm