ರಾಯಚೂರು : ಡೆಡ್ಲಿ ಸೋಂಕು ಕೊರೊನಾದಿಂದ ಕಳೆದ 8 ತಿಂಗಳಿನಿಂದ ಕಾಲೇಜು ಕದ ಮುಚ್ಚಲಾಗಿತ್ತು.
ಸದ್ಯ ಸಕಲ ಮುಂಜಾಗೃತ ಕ್ರಮಗಳ ಮಧ್ಯೆ ಇಂದಿನಿಂದ ರೀ ಓಪನ್ ಮಾಡಲಾದ್ರು ವಿದ್ರಾರ್ಥಿಗಳು ಕಾಲೇಜಿಗೆ ಬರಲು ಆಸಕ್ತಿ ತೋರುತ್ತಿಲ್ಲ.
ರಾಯಚೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಬ್ಬಳೇ ವಿದ್ಯಾರ್ಥಿನಿ ಆಗಮಿಸಿದ್ದು, ಆಕೆಗೆ ಉಪನ್ಯಾಸಕರು ಪಾಠ ಮಾಡಿದ್ದಾರೆ.
ಒಬ್ಬ ಬಿ.ಕಾಂ. ವಿದ್ಯಾರ್ಥಿನಿಗೆ ಶಿಕ್ಷಕರು ಕೊರೊನಾ ಕ್ರಮಗಳ ನಡುವೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಕಾಲೇಜಿನಲ್ಲಿ ಒಟ್ಟು ಪದವಿ ಅಂತಿಮ ವರ್ಷದಲ್ಲಿ 1200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರೆ ಯಾರೊಬ್ಬರು ಕಾಲೇಜ್ ನತ್ತ ಮುಖಮಾಡಿಲ್ಲ.
ಒಬ್ಬಳೆ ವಿದ್ಯಾರ್ಥಿನಿ ಕಾಲೇಜ್ ಗೆ ಬಂದಿದ್ದಾಳೆ.
ರಾಜ್ಯದ ಎಲ್ಲೆಡೆ ಕಾಲೇಜುಗಳು ತೆರೆದರೂ ವಿದ್ಯಾರ್ಥಿಗಳ ಬರುವಿಕೆಯಲ್ಲಿ ನಿರಸ ಪ್ರತಿಕ್ರಿಯೆ ಕಾಣುತ್ತಿದೆ.
PublicNext
17/11/2020 11:55 am