ನವದಹಲಿ : ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಮ್ಯಾಕ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ಜೊತೆಗೆ ಸಿಸೋಡಿಯಾ ಅವರಿಗೆ ಡೆಂಗ್ಯೂ ಕೂಡಾ ಅಟ್ಯಾಕ್ ಆಗಿತ್ತು ಹಾಗಾಗಿ ಅವರನ್ನು ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಿಂದ ಮ್ಯಾಕ್ಸ್ ಅಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ಲಾಸ್ಮಾ ಥೆರಪಿಯನ್ನು ಕೂಡ ಮಾಡಿದ್ದರು. ಸೆಪ್ಟೆಂಬರ್ 14ರಂದು ಮನೀಶ್ ಸಿಸೋಡಿಯಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.
ಸದ್ಯ ಎಲ್ಲಾ ಸೋಂಕಿನಿಂದ ಮುಕ್ತರಾದ ಅವರು ಮ್ಯಾಕ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
PublicNext
29/09/2020 05:06 pm