ಜಗತ್ತನ್ನೇ ಅನಿಶ್ಚಿತತೆಯ ಕತ್ತಲಲ್ಲಿ ಕೆಡವಲು ಕೋವಿಡ್ ಎಂಬ ಸಾಂಕ್ರಾಮಿಕ ಪ್ರಯತ್ನಿಸುತ್ತಿರುವ ವೇಳೆಯಲ್ಲೇ, ಬೆಳಕಿನ ಹಬ್ಬ ದೀಪಾವಳಿ ಬಂದಿದೆ.
ಈಗಷ್ಟೇ ಸಕಲ ಜಾಗೃತಿಯೊಂದಿಗೆ ನವರಾತ್ರಿಯನ್ನು ಆಚರಿಸಿದ ಜನ ಸದ್ಯ ದೀಪಾವಳಿಯ ಹೊಸ್ತಿಲಲ್ಲಿ ಮನೆಮನಗಳಲ್ಲೂ ಉತ್ಸಾಹ ತುಂಬಿದ್ದಾರೆ.
ಹೊಸ ಬಟ್ಟೆ, ಸಿಹಿ ಖಾದ್ಯ, ಹಣ್ಣು-ಹೂಗಳು, ಪಟಾಕಿಗಳ ಖರೀದಿ. ಹಬ್ಬವಾಚರಿಸಲು ಮಹಾನಗರಗಳಿಂದ ಊರಿಗೆ ಹೊರಟುನಿಂತವರು
ಅವರಲ್ಲಿ ಮನೆಮಾಡಿರುವ ಸಡಗರದ ವಾತಾವರಣವೆಲ್ಲ, ಭಾರತೀಯರಲ್ಲಿ ದೀಪಾವಳಿ ಹಬ್ಬ ಎಂಥ ಸ್ಥಾನ ಪಡೆದಿದೆ ಎನ್ನುವುದನ್ನು ಸಾರುತ್ತಿದೆ.
ವಿಶೇಷವೆಂದರೆ, ಲಾಕ್ ಡೌನ್ನಿಂದಾಗಿ ತತ್ತರಿಸಿರುವ ಆರ್ಥಿಕತೆಗೆ ಹಬ್ಬಗಳು ಬಲ ತುಂಬಲಾರಂಭಿಸಿವೆ.
ಹಬ್ಬದ ಅಬ್ಬರದಲ್ಲಿ ಮರೆಯದಿರೋಣ ಸ್ವಚ್ಚತೆ, ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವಂಥ ಸುರಕ್ಷಾ ಕ್ರಮಗಳ ಕಡೆಗಣನೆ ಮಾಡಬೇಡಿ.
ಕೋವಿಡ್ ನ ಅಪಾಯ ಇನ್ನೂ ದೂರವಾಗಿಲ್ಲ. ನಿತ್ಯವೂ ಸಾವಿರಾರು ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಾಲುಸಾಲು ಹಬ್ಬಗಳ ಸಮಯದಲ್ಲಿ ಎಚ್ಚರಿಕೆ ವಹಿಸದಿದ್ದರೆ ಒಂದೇ ತಿಂಗಳಲ್ಲೇ ಪ್ರಕರಣಗಳ ಸಂಖ್ಯೆ 2 ದಶಲಕ್ಷ ದಾಖಲಾಗಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.
ಇನ್ನು ದೀಪಾವಳಿಯ ವೇಳೆ ಪಟಾಕಿ ಹೊಡೆಯುವ ಮುನ್ನ ಸ್ಯಾನಿಟೈಸರ್ ಬಾಕ್ಸ್ ಗಳಿಂದ ದೂರವಿಡಿ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಅಂಶವಿರುವುದರಿಂದ ತ್ವರಿತವಾಗಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.
ಎಚ್ಚರಿಕೆಯಿಂದಿರಿ ಹೀಗಾಗಿ, ಸಕಲ ಎಚ್ಚರಿಕೆಯೊಂದಿಗೆ ಬೆಳಕಿನ ಹಬ್ಬವನ್ನು ಸಂಭ್ರಮಿಸಿ.
PublicNext
14/11/2020 07:37 am