ವಿಜಯಪುರ: ಬಾಣಂತಿಯರ ಆಪರೇಷನ್ ಹೊಲಿಗೆ ಬಿಚ್ಚಿ ರಕ್ತಸ್ರಾವದಿಂದ ನರಳಾಟವಾಗಿರುವ ಘಟನೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿಸಿಕೊಂಡ ಸರಿ ಸುಮಾರು 25 ಬಾಣಂತಿಯರು ರಕ್ತಸ್ರಾವ ನರಳಾಡುತ್ತಿದ್ದಾರೆ ಎನ್ನಲಾಗಿದೆ.
ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆಣ್ಣುಮಕ್ಕಳು ಬಿಚ್ಚಿಕೊಂಡ ಹೊಲಿಗೆಯನ್ನು ಸರಿ ಮಾಡಲು ಆಗಮಿಸುತ್ತಿದ್ದು, ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯ ಕಾರಣ ಅಂಥ ನೊಂದವರು ಹೇಳುತ್ತಿದ್ದಾರೆ. ಜಿಲ್ಲಾಸ್ಪತ್ರೆ ಅಂದ್ರೆ ಸಾಕು ಜನರು ಬೆಚ್ಚಿ ಬೀಳ್ತಾರೆ. ಯಾಕಂದ್ರೆ ಅಲ್ಲಿಯ ಅವ್ಯವಸ್ಥೆ, ವೈದ್ಯರ ಎಡವಟ್ಟುಗಳನ್ನು ಕಂಡು ಜಿಲ್ಲಾಸ್ಪತ್ರೆಗಳಿಗೆ ಹೋಗಲು ಜನ ಭಯ ಪಡುತ್ತಾರೆ. ಆದ್ರೆ ಬಡ ರೋಗಿಗಳಿಗೆ ಮಾತ್ರ ಜಿಲ್ಲಾಸ್ಪತ್ರೆ ಆನಿವಾರ್ಯ. ಆದರೆ ವಿಜಯಪುರದ ಜಿಲ್ಲಾಸ್ಪತ್ರೆಯ ಎಡವಟ್ಟಿನಿಂದ ಇದೀಗ ಬಾಣಂತೀಯರು ನರಳಾಡುವಂತಾಗಿದೆ.
PublicNext
14/05/2022 11:01 pm