ಮೈಸೂರು: ಬೆಟ್ಟ ಹತ್ತುವ ವೇಳೆ ಯುವಕನಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮಲ್ಲಿಕಾರ್ಜುನ ಬೆಟ್ಟದಲ್ಲಿ ಈ ದುರ್ಘಟನೆ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕೆಳಗನಹಳ್ಳಿ ಕುಮಾರ್ ಎಂಬಾತನೇ ಮೃತ ಯುವಕ. ಇಂದು ಶುಕ್ರವಾರ ಬೆಳಿಗ್ಗೆ ಬೆಟ್ಟ ಹತ್ತುವ ವೇಳೆ ಕುಸಿದು ಬಿದ್ದ ಯುವಕ ಮೃತಪಟ್ಟಿದ್ದಾನೆ. ಪಿರಿಯಾಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
05/11/2021 04:42 pm