ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ ಲೀಲೆ : ಮಾಡಿದ್ದು ಎಂಬಿಎ ಇಳಿದದ್ದು ಸರಗಳ್ಳತನಕ್ಕೆ!

ಬೆಂಗಳೂರ : ಕೊರೊನಾ ಒಳ್ಳೆಯವರನ್ನು ಕಳ್ಳರನ್ನಾಗಿಸಿದೆ. ಡೆಡ್ಲಿ ಸೋಂಕಿನ ಆರ್ಭಟ ಆರಂಭವಾದಾಗಿನಿಂದ ಆಗಿದೆಲ್ಲವೂ ಬರೀ ಕೇಡು.

ಪ್ರತಿ ಕ್ಷೇತ್ರವು ಸುಧಾರಿಸಿಕೊಳ್ಳಲಾಗದ ಹಂತ ತಲುಪಿವೆ. ಸದ್ಯ ಕೋವಿಡ್ ಸೋಂಕಿನಿಂದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ಎಂಬಿಎ ಗೆ ಪದವೀಧರ ಶೇಖ್ ಗೌಸ್ ಬಾಷಾ ಸರಗಳ್ಳತನಕ್ಕೆ ಇಳಿದು ಪೊಲೀಸರ ಅತಿಥಿಯಾಗಿದ್ದಾನೆ.

ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದ ಗೌಸ್ 35,000 ಸಾಲ ತೀರಿಸಲು ಕಳ್ಳತನ ಶುರು ಮಾಡಿದ್ದಾನೆ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿ ಎಸ್ಕೇಫ್ ಆಗಿದ್ದ. ಸದ್ಯ ಜಯನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ,"ಸರ್..ಎಂಬಿಎ ಪದವೀಧರ ನಾನು..ಕೊರೊನಾ ವೇಳೆ ಕೆಲಸದಿಂದ ತೆಗೆದುಹಾಕಿದ್ರು.

"ಸಾಲಗಾರರ ಕಿರುಕುಳ ಹೆಚ್ಚಾಗಿತ್ತು.. "ಬೇರೆಡೆ ಕೆಲಸಕ್ಕೆ ಟ್ರೈ ಮಾಡಿದ್ದೆ, ಆದರೇ ಕೆಲಸ ಸಿಕ್ಕಿರ್ಲಿಲ್ಲ.. ಹೀಗಾಗಿ ಸರಗಳ್ಳತನಕ್ಕೆ ಮುಂದಾದೆ' ಎಂದು ಹೇಳಿದ್ದಾನೆ.

Edited By : Nirmala Aralikatti
PublicNext

PublicNext

31/07/2021 06:06 pm

Cinque Terre

165.67 K

Cinque Terre

14