ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ವಾನಗಳ ಮಾರಣಹೋಮ: 3 ದಿನದಲ್ಲಿ 202 ನಾಯಿಗಳು ಸಾವು- ಬೆಚ್ಚಿಬಿದ್ದ ಜನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಬಿಷ್ಣುಪುರ ನಗರದಲ್ಲಿ ಕೇವಲ ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಶಾನ್ವಗಳು ಸಾವನ್ನಪ್ಪಿದ್ದು, ಜನರನ್ನು ಆತಂಕಕ್ಕೆ ಒಳಗಾಗಿದ್ದಾರೆ.

ವರದಿಗಳ ಪ್ರಕಾರ ಮಂಗಳವಾರ 60, ಬುಧವಾರ 97 ಹಾಗೂ ಗುರುವಾರ 45 ಸೇರಿದಂತೆ ಮೂರು ದಿನಗಳಲ್ಲಿ 202 ನಾಯಿಗಳು ಮೃತಪಟ್ಟಿವೆ ಎಂದ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ. ಇವುಗಳು ಸೋಂಕಿನಿಂದ ಮೃತಪಟ್ಟಿವೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟ ನಾಯಿಗಳ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕೋಲ್ಕತ್ತಾಕ್ಕೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ನಾಯಿಗಳ ಶವವನ್ನು ಬಿಷ್ಣುಪುರ ಪುರಸಭೆಯವರು ಒಂದು ಕಡೆ ತೆಗೆದುಕೊಂಡು ಡಂಪಿಂಗ್ ಮಾಡಿದ್ದಾರೆ.

ನಾಯಿಗಳಿಗೆ ಈ ಸಮಯದಲ್ಲಿ ಸೋಂಕು ಬರುವುದು ಸಾಮಾನ್ಯವಾಗಿದೆ. ಈ ಕುರಿತಾಗಿ ಆತಂಕಪಡುವ ಅಗತ್ಯವಿಲ್ಲ. ನಾಯಿಗಳಿಗೆ ಹರಡಿದ ಸೋಂಕು ಇತರ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವ ಸಾಧ್ಯತೆ ಇಲ್ಲ. ನಾಯಿಗಳ ದ್ರವವನ್ನು ಪಡೆದಿದ್ದೇವೆ ಪರೀಕ್ಷೆ ಮಾಡುತ್ತೇವೆ ಎಂದು ಪಶುವೈದ್ಯರು ಮಾಹಿತಿ ನೀಡಿದ್ದಾರೆ.

Edited By : Vijay Kumar
PublicNext

PublicNext

21/02/2021 02:46 pm

Cinque Terre

53.55 K

Cinque Terre

0