ಕೋಲಾರ: ಅವಧಿ ಮೀರಿದ ಚಾಕೊಲೇಟ್ ಸೇವಿಸಿ ಬಾಲಕ ಅಸ್ವಸ್ಥಗೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಎಸ್ ಟಿ ಬ್ಲಾಕ್ನಲ್ಲಿ ನಡೆದಿದೆ. ಸಿಲಂಬರಸನ್ ಎಂಬುವವರ ಮಗ ಲಚ್ಚನ್ (6ವರ್ಷ) ಅಸ್ವಸ್ಥ ಬಾಲಕನಾಗಿದ್ದಾನೆ. ಕಳೆದ ರಾತ್ರಿ ಎಕ್ಸಪೈರ್ ಆಗಿರುವ ಚಾಕಲೇಟ್ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ. ಕೆಜಿಎಫ್ ನಗರದ ಸಲ್ಡಾನ ವೃತ್ತದಲ್ಲಿರುವ ಜೆ.ಎಸ್.ಮೆಡಿಕಲ್ ಶಾಪ್ನಲ್ಲಿ ಚಾಕೊಲೇಟ್ ಖರೀದಿ ಮಾಡಲಾಗಿದೆ. ನಂತರ ಚಾಕಲೇಟ್ ಸೇವಿಸುತ್ತಿದ್ದಂತೆ ಬಾಲಕ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ.
ಬಾಲಕನನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಧಿ ಮೀರಿದ ಚಾಕಲೇಟ್ ಕೊಟ್ಟ ಮೆಡಿಕಲ್ ಶಾಪ್ ಮೇಲೆ ಬಾಲಕನ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ.
PublicNext
13/02/2021 11:40 am