ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಶೆ ನಟಿಗೆ ಬೆನ್ನುನೋವು : ಜೈಲಾಸ್ಪತ್ರೆ ಬೇಡ ಖಾಸಗಿ ಆಸ್ಪತ್ರೆ ಸೇರಿಸಲು ಒತ್ತಾಯ

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಅತಿಥಿಯಾಗಿರುವ ನಟಿ ರಾಗಿಣಿಗೆ ನಿನ್ನೆ ವಿಪರೀತ ಬೆನ್ನುನೋವು ಎಂದು ರಾತ್ರಿಪೂರ್ತಿ ಅವರು ನರಳಾಡಿದ್ದಾರೆ ಎನ್ನಲಾಗಿದೆ.

ತಮಗೆ ತುರ್ತಾಗಿ ಬೆನ್ನುನೋವಿನ ಚಿಕಿತ್ಸೆ ನೀಡಿ, ನೋವು ತಡೆಯಲು ಆಗುತ್ತಿಲ್ಲ ಎಂದು ಒಂದೇ ಸಮನೆ ಈ 'ನಶೆ' ನಟಿ ಗೋಳಾಡಿದ್ದಾರೆ.

ತುರ್ತಾಗಿ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಕೆಲ ದಿನಗಳಿಂದ ರಾಗಿಣಿ, ತಮಗೆ ಬೆನ್ನುನೋವು ಇರುವ ಬಗ್ಗೆ ಹೇಳಿದ್ದರು.

ಅಲ್ಲಿಂದ ಇಲ್ಲಿಯವರೆಗೂ ತಮಗೆ ಜೈಲಿನಲ್ಲಿ ಇರಲು ಆಗುತ್ತಿಲ್ಲ, ವಿಪರೀತ ಬೆನ್ನುನೋವಾಗಿರುವ ಕಾರಣ, ಯಾವುದಾದರೂ ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ.

ಇದೀಗ ನಿನ್ನೆ ರಾತ್ರಿಪೂರ್ತಿ ಜೈಲಿನಲ್ಲಿ ಗೋಳಾಟ ನಡೆಸಿ ಅಧಿಕಾರಿಗಳ ನಿದ್ದೆ ಗೆಡಿಸಿರುವ ನಟಿಗೆ ರಾತ್ರಿ ಪೂರ್ತಿ ಚಿಕಿತ್ಸೆ ನೀಡಲಾಗಿದೆಯಂತೆ.

ಇದೇ ವೇಳೆ, ಬೆನ್ನುನೋವಿನ ಕಾರಣ ನೀಡಿ, ರಾಗಿಣಿ ಪರ ವಕೀಲರು ಕೋರ್ಟ್ ಮೊರೆ ಕೂಡ ಹೋಗಿದ್ದಾರೆ.

ಜೈಲಿನಲ್ಲಿರುವ ಆಸ್ಪತ್ರೆಯ ಚಿಕಿತ್ಸೆ ಸಾಲುತ್ತಿಲ್ಲ. ಯಾವುದಾದರೂ ಖಾಸಗಿ ಆಸ್ಪತ್ರೆಗೆ ತಮ್ಮನ್ನು ದಾಖಲಿಸಲು ಅನುಮತಿ ನೀಡಿ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

15/10/2020 10:04 am

Cinque Terre

132.42 K

Cinque Terre

4

ಸಂಬಂಧಿತ ಸುದ್ದಿ