ಲಕ್ನೋ: ಇತ್ತೀಚೆಗೆ ಸಲಿಂಗ ವಿವಾಹಗಳು ಸಾಮಾನ್ಯ ಎನ್ನುವಂತಾಗಿದೆ. ಆದರೂ ಇನ್ನು ಕೆಲವೆಡೆ ಮನೆಯವರು ಮಕ್ಕಳ ಸಲಿಂಗ ಪ್ರೇಮಕ್ಕೆ ವಿರೋಧವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಇಲ್ಲೊಂದು ಪ್ರಕರಣದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗವನ್ನೇ ಬದಲಾಯಿಸಿಕೊಂಡ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.
ಮನೆಯವರು ಈ ಇಬ್ಬರು ಯುವತಿಯ ಮದುವೆ ವಿರೋಧಿಸುತ್ತಿದ್ದಂತೆ ಅವರಲ್ಲಿ ಒಬ್ಬಳು ಶಸ್ತ್ರಚಿಕಿತ್ಸೆ ಮೂಲಕ ಲಿಂಗವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದಳು.ಪ್ರಯಾಗ್ ರಾಜ್ ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ಸಂಪೂರ್ಣ ಪುರುಷನಾಗಲು ಸುಮಾರು 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ. ಮೋಹಿತ್ ಜೈನ್ ಹೇಳಿದ್ದಾರೆ. ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಯುವತಿ ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ರೀತಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಸಂಪೂರ್ಣ ಚಿಕಿತ್ಸೆ 18 ತಿಂಗಳಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
PublicNext
27/06/2022 08:14 pm