ಬೆಳಗಾವಿ: ಚುಚ್ಚುಮದ್ದು ಪಡೆದ ಮೂವರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೊಡಲು ಆರೋಗ್ಯ ಸಚಿವ ಡಾ. ಸುಧಾಕರ್ ಬೆಳಗಾವಿ ಜಿಲ್ಲಾಸ್ಪತ್ರೆಗೆ ಆದೇಶಿಸಿದ್ದಾರೆ.
ಜಿಲ್ಲಾಸ್ಪತ್ರೆ ಬಿಮ್ಸ್ನಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. 13 ತಿಂಗಳ ಮಗು ಪವಿತ್ರಾ ಹುಲಗುರ್, 14 ತಿಂಗಳ ಮಗು ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಮೃತಪಟ್ಟ ಹಸುಗೂಸುಗಳು. ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ಈ ಮಕ್ಕಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇದೀಗ ಮೃತಪಟ್ಟಿವೆ.
ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಹೊರ ಬೀಳಲಿದೆ. ಮಕ್ಕಳ ಸಾವಿನ ಬಗ್ಗೆ ಕುಲಗೋಡ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
16/01/2022 06:56 pm