ದಾವಣಗೆರೆ: ಒಂದೆಡೆ ಕೊರೊನಾ ಲಸಿಕೆ ಸಿಗಲ್ಲ ಅಂತಾ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಕಾಳಸಂತೆಯಲ್ಲಿ ವ್ಯಾಕ್ಸಿನ್ ಮಾರಾಟ ಆಗುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕ ಎಂಬಂತೆ ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟಕ್ಕೆ ಯತ್ನಿಸರುವ ಪ್ರಕರಣ ಬೆಳಕಿಗೆ ಬಂದಿದ್ದು, ಲಸಿಕೆ ಮಾರಾಟ ಮಾಡಲು ಹೊರಟಿದ್ದವರನ್ನು ಜನರೇ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಈ ಘಟನೆ ಹರಿಹರ ತಾಲೂಕಿನ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಲಸಿಕೆ ಮಾರಾಟ ಮಾಡಲು ಹೊರಟಿದ್ದ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.
ಆಸ್ಪತ್ರೆಯ ನರ್ಸ್ ರೂಪಾ, ಮತ್ತು ಸಿಬ್ಬಂದಿ ಲಕ್ಷ್ಮಣ್ ಅವರನ್ನು ಜನರೇ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಕ್ಕನೂರು ಪಿಎಚ್ ಸಿ ಯಿಂದ ದಾವಣಗೆರೆ ಕಡೆ 50 ಡೋಸ್ ವ್ಯಾಕ್ಸಿನ್ ಮಾರಲು ಸಿಬ್ಬಂದಿ ತೆರಳುತ್ತಿದ್ದರು. ಈ ವೇಳೆ ಕೊಕ್ಕನೂರು ಗ್ರಾಮಸ್ಥರು ಅವರನ್ನು ಹಿಂಬಾಲಿಸಿ ತಡೆದು ಪ್ರಶ್ನಿಸಿದಾಗ ಬೆಳಕಿಗೆ ಬಂದಿದೆ.
ನಾವು ನಿತ್ಯ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನ್ ಕೇಳಲು ಬರುತ್ತೇವೆ. ನೀವು ಕದ್ದು ಇವುಗಳನ್ನ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆ ತಂದಾಗ ಕದ್ದು ವ್ಯಾಕ್ಸಿನ್ ತೆಗೆದುಕೊಂಡು ಹೋಗುತ್ತಿದ್ದದ್ದು ಬಹಿರಂಗ ಆಗಿದೆ. ಇಂತ ಅಕ್ರಮ ಎಸಗಲು ಮುಂದಾದ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.
PublicNext
18/08/2021 08:14 pm