ಬೆಂಗಳೂರು : ಕೊರೊನಾ ಸೋಂಕಿಗೆ ಯಾವುದೇ ಜಾತಿ,ಧರ್ಮದ ಹಂಗಿಲ್ಲ ಹಾಗಾಗಿ ಯಾರನ್ನು ಬಿಡದೇ ಕಾಡುತ್ತಿದೆ.
ಸಧ್ಯ ಜೈಲು ಹಕ್ಕಿಗಳಿಗೆ ಈ ಸೋಂಕು ಮುಳುವಾಗಿದ್ದು ರಾಜ್ಯದ ಬರೋಬ್ಬರಿ 47 ಜೈಲುಗಳ ಪೈಕಿ 668 ಕೈದಿಗಳಿಗೆ ಸೋಂಕು ತಗುಲಿದೆ.
ಸೋಂಕಿತರಲ್ಲಿ ಈಗಾಗಲೇ 585 ಮಂದಿ ಚೇತರಿಸಿಕೊಂಡಿದ್ದಾರೆ.
83 ಸೋಂಕಿತ ಕೈದಿಗಳಿಗೆ ಕೋವಿಡ್ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಾರಾಗೃಹಗಳಲ್ಲಿ ಐಸೋಲೇಷನ್ ವಾರ್ಡ್ ಗಳನ್ನು ಸಿದ್ಧಪಡಿಸಲಾಗಿದೆ. ಕೈದಿಗಳ ದಟ್ಟಣೆ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
PublicNext
01/10/2020 08:24 am