ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರೊನಾ ಮರಸೋಂಕು ಉತ್ಪತ್ತಿ, ಗುಣಮುಖರಾದ್ರೂ ನಿಮ್ಮ ಆರೋಗ್ಯ ನೋ ಸೇಫ್ !

ನವದೆಹಲಿ : ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ ಹಾಂಕಾಂಗ್ ನಲ್ಲಿ ಮತ್ತೆ ಮರುಸೋಂಕು ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು ನಂತರದಲ್ಲಿ ವಿಶ್ವದ ಹಲವೆಡೆ ಬಂದಿರುವುದು ತಿಳಿದು ಬಂದಿದೆ.

ಭಾರತದಲ್ಲೂ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ನೋಯ್ಡಾ ಮತ್ತು ಮುಂಬೈನ ಕೆಲ ಆರೋಗ್ಯ ಸೇವಕರಲ್ಲಿ ಕೋವಿಡ್-19 ಮರುಸೋಂಕು ಬಂದಿರುವುದು ಖಚಿತವಾಗಿದೆ ಕೊರೋನಾ ಸೋಂಕು ಬಂದು ಗುಣಮುಖಗೊಂಡು ಆರೋಗ್ಯ ಸರಿಯಾದವರಲ್ಲೇ ಮತ್ತೆ ಸೋಂಕು ಕಾಣಿಸಿದೆ.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಇದು ಮೊದಲೇ ಇದ್ದ ಸೋಂಕು ಮತ್ತೆ ಮುಂದುವರೆಯದೆ ಹೊಸದಾಗಿ ಮತ್ತೆ ಸೋಂಕು ಕಾಣಿಸಿದೆ. ವೈರಾಣುವಿನ ತಳಿ ಹೊಸದಾಗಿ ರೂಪಾಂತರ ಆಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಉನ್ನತ ವಿಜ್ಞಾನಿಗಳು ಹಾಗೂ ವೈದ್ಯರ ಚಾಣಾಕ್ಷತೆಯನ್ನೇ ಕಳವಳಕ್ಕೆ ದೂಡಿದೆ.

ದೆಹಲಿಯ ಗ್ರೇಟರ್ ನೋಯ್ಡಾದ ಜಿಐಎಂಎಸ್ ಆಸ್ಪತ್ರೆಯ ಇಬ್ಬರಿಗೆ ಹಾಗೂ ಎರಡು ಮುಂಬೈ ಆಸ್ಪತ್ರೆಗಳ ನಾಲ್ವರು ವ್ಯಕ್ತಿಗಳಿಗೆ ರೀ ಇನ್ಪೇಕ್ಷನ್ ಆಗಿರುವ ಪ್ರರಣಗಳು ಬೆಳಕಿಗೆ ಬಂದಿದೆ.

ಪ್ರಥಮವಾಗಿ ಬಂದ ಸೋಂಕಿನ ವೇಳೆ ಸಂಗ್ರಹಿಸಲಾಗಿದ್ದ ವೈರಸ್ನ ಆರ್ಎನ್ಎ ಸ್ಯಾಂಪಲ್ ಹಾಗೂ ಮರುಸೋಂಕಿನ ವೇಳೆ ಸಂಗ್ರಹಿಸಲಾದ ಆರ್ಎನ್ಎ ಸ್ಯಾಂಪಲ್ ಅನ್ನು ಹೊಂದಾಣಿಕೆ ಮಾಡಿ ನೋಡಿದಾಗ ಎರಡರಲ್ಲೂ ತಳಿಗಳಲ್ಲೂ ವ್ಯತ್ಯಾಸ ಇದೆ ಎಂದು ದೆಹಲಿಯ ಐಜಿಐಬಿ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

ಕೊರೋನಾ ವೈರಾಣುವನ್ನು ಗಮನದಲ್ಲಿಟ್ಟುಕೊಂಡೆ ಲಸಿಕೆಗಳನ್ನ ಕಂಡು ಹಿಡಿಯಲಾಗುತ್ತದೆ ಆದರೆ, ಹೊಸ ರೂಪ ತಳೆದ ಜೀನ್ ಹೊಂದಿರುವ ವೈರಸ್ ಮೇಲೂ ಅದೇ ಲಸಿಕೆ ಎಷ್ಟು ಪ್ರಭಾವ ಬಿರಬಲ್ಲದು ? ಈ ನಿಟ್ಟಿನಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಐಜಿಐಬಿಯ ನಿರ್ದೇಶಕ ಡಾ. ಅನುರಾಗ್ ಅಗರ್ವಾಲ್, ಇದೇನೂ ಅಷ್ಟು ಭಯ ಪಡುವಂಥದ್ದಲ್ಲ. ಇಂಥ ಪ್ರಕರಣಗಳು ಬಹಳ ಅಪರೂಪ. ಸಾಗರದಲ್ಲಿ ನೀರಿನ ಹನಿ ಇದ್ದಂತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

19/09/2020 01:53 pm

Cinque Terre

154.2 K

Cinque Terre

3