ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಹೃದಯಾಘಾತಕ್ಕೆ ಅನುವಂಶೀಯ ಕಾರಣ ಇದೆ: ಡಾ. ಸಿ.ಎನ್ ಮಂಜುನಾಥ್

ಮೈಸೂರು: ನಟ ದಿ. ಪುನೀತ್ ರಾಜ್‍ಕುಮಾರ್ ಹೃದಯಾಘಾತಕ್ಕೆ ಅನುವಂಶೀಯ ಕಾರಣಗಳಿವೆ. ಹಾಗೂ ಅವರ ಕುಟುಂಬಕ್ಕೆ ಹೃದಯ ಸಂಬಂಧಿ ತೊಂದರೆಗಳಿವೆ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‌ ಪುನೀತ್ ಸಹೋದರರಾದ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರಿಗೂ ಹೃದಯ ಸಂಬಂಧಿ ತೊಂದರೆ ಇದೆ. ಇದು ಅನುವಂಶೀಯವಾಗಿ ಬಂದಿದೆ. ಇದೇ ಕಾರಣದಿಂದ ಪುನೀತ್‌ಗೆ ಹೃದಯಾಘಾತ ಆಗಿದೆ ಎಂದಿದ್ದಾರೆ.

ಬದಲಾದ ಜೀವನ ಶೈಲಿ, ಆಹಾರ‌ ಕ್ರಮ ಹಾಗೂ ಸೋಮಾರಿತನದಿಂದ ಯುವ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಯುವಜನರಲ್ಲಿ ಶೇಕಡಾ 50 ರಷ್ಟು ಧೂಮಪಾನಿಗಳಾಗಿದ್ದಾರೆ. ಮೊದಲೆಲ್ಲ ವಯಸ್ಸಾದ ಪೋಷಕರನ್ನು ಮಕ್ಕಳು ಆಸ್ಪತ್ರೆಗೆ ಕರೆತರುತ್ತಿದ್ದರು‌. ಈಗ ಪೋಷಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

11/09/2022 01:49 pm

Cinque Terre

86.4 K

Cinque Terre

3

ಸಂಬಂಧಿತ ಸುದ್ದಿ