ಬೆಂಗಳೂರು: ಅಯ್ಯಪ್ಪ ಸ್ವಾಮಿ ಪೂಜೆ ಮಾಡುವಾಗ ಬಿದ್ದು ಆಸ್ಪತ್ರೆ ಸೇರಿದ್ದ ಹಿರಿಯ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯ ಡಾ. ಎಸ್ ಎನ್ ಮೋಹನ್ ತಿಳಿಸಿದ್ದಾರೆ.
ಸಾಕಷ್ಟು ವರ್ಷದಿಂದ ಅವರಿಗೆ ಟ್ರೀಟ್ ಮೆಂಟ್ ಕೊಡಲಾಗುತ್ತಿದ್ದು, ಆಸ್ಪತ್ರೆಗೆ ಬರೋವಾಗಲೇ ಬ್ರೈನ್ ಅನ್ ಕೋನ್ಶಿಯಸ್ ಆಗಿತ್ತು.
ಅವರಿಗೆ ಪ್ರಜ್ಞೆಯಿಲ್ಲ.. ಸದ್ಯದ ಪರಿಸ್ಥಿತಿಯಲ್ಲಿ ಸರ್ಜರಿ ಮಾಡಲು ಸಾಧ್ಯವಿಲ್ಲ.ಸದ್ಯಕ್ಕೆ ಎನಾಗುತ್ತೋ ನೋಡಬೇಕು ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆಂದರು.
ಮೂರು ದಿನದ ಹಿಂದೆ ಗಾಡಿ ಓಡಿಸುವಾಗ ತಲೆಸುತ್ತು ಬಂದು ಪೋಲ್ ಗೆ ಹೋಗಿ ಗಾಡಿ ಗುದ್ದಿದ್ದರು ಆಗ ಅವರನ್ನು ಅವರ ಪ್ರೆಂಡ್ ಕರ್ಕೊಂಡ್ ಬಂದು ಚಿಕಿತ್ಸೆ ಕೊಡಿಸಿದ್ದರು. ಫಿಸಿಕಲಿ ಯಾವುದೇ ಡ್ಯಾಮೇಜ್ ಆಗಿರಲಿಲ್ಲ.ಅಂದು ನಡೆದೇ ಆಸ್ಪತ್ರೆಯ ಒಳಗೆ ಬಂದಿದ್ರು.
ಆದರೆ ಈ ಬಾರಿ ಪರಿಸ್ಥಿತಿ ತುಂಬಾನೆ ಕ್ರಿಟಿಕಲ್ ಆಗಿದ್ದು ,ಬ್ರೈನ್ ಊತ ಕಡಿಮೆ ಬರೋ ಚಿಕಿತ್ಸೆ ನೀಡಿದ್ದೇವೆ.ಇನ್ನೇನಿದ್ದರು ಆರೋಗ್ಯದಲ್ಲಿ ಮಿರಾಕಲ್ ಆಗಬೇಕು.ಆಗುತ್ತೆ ಅಂತ ನಾವೆಲ್ಲ ಕಾಯ್ತಿದ್ದಿವಿ ಎಂದರು.
PublicNext
02/12/2021 04:24 pm