ಕೊಪ್ಪಳ: ನಟ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದ ಕೊಪ್ಪಳದ ಅಭಿಮಾನಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಜ್ಞಾನಪೂರ್ತಿ ನಿಂಗಾಪುರ (40) ಎಂಬುವವರೇ ಮೃತಪಟ್ಟ ಅಭಿಮಾನಿ.
ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಜ್ಞಾನಮೂರ್ತಿ ನಿಂಗಾಪುರ ಅಸ್ವಸ್ಥರಾದ ಕಾರಣ ತಕ್ಷಣ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿರಾಣಿ ಅಂಗಡಿ ನಡೆಸುತ್ತಿದ್ದ ಜ್ಞಾನಮೂರ್ತಿ ಅಪ್ಪಟ ಪುನೀತ್ ಅಭಿಮಾನಿಯಾಗಿದ್ದರು. ಪುನೀತ್ ನಟನೆಯ ಎಲ್ಲ ಸಿನಿಮಾಗಳನ್ನು ಇವರು ಚಿತ್ರಮಂದಿರದಲ್ಲೇ ನೋಡುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
PublicNext
30/10/2021 08:35 pm