ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಾವಿಗೂ ಮುನ್ನ ಎಲ್ಲಿಗೆ ಹೋಗಿದ್ರು, ಏನೆಲ್ಲಾ ಆಯಿತು ಎಂಬ ಬಗ್ಗೆ ಅವರ ಪ್ಯಾಮಿಲಿ ಡಾಕ್ಟರ್ ರಮಣರಾವ್ ಮಾಹಿತಿ ನೀಡಿದ್ದಾರೆ. ಅವರದ್ದು ಸಡನ್ ಡೆತ್ ಅಥವಾ ಕಾರ್ಡಿಯಾಕ್ ಆರೆಸ್ಟ್ ಎಂದು ಅವರ ಪ್ಯಾಮಿಲಿ ಡಾಕ್ಟರ್ ರಮಣರಾವ್ ಹೇಳಿದ್ದಾರೆ.
"ನಿನ್ನೆ (ಶುಕ್ರವಾರ) ಬೆಳಗ್ಗೆ 11:15ಕ್ಕೆ ಕ್ಲಿನಿಕ್‌ಗೆ ಬಂದಾಗ ಪುನೀತ್ ಬೆವರುತ್ತಿದ್ದರು. ಕೇಳಿದ್ರೆ ಇಲ್ಲಾ, ಜಿಮ್‌ನಿಂದ ಬರುತ್ತಿರುವುದಾಗಿ ಹೇಳಿದರು. ಆದಾಗ್ಯೂ, ಇಸಿಜಿ ಪರೀಕ್ಷೆ ಮಾಡಿದಾಗ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಪುನೀತ್‌ಗೆ ಸೂಚಿಸಿದ್ದೆ. ಐದೇ ನಿಮಿಷದಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾಗಿ ಡಾಕ್ಟರ್ ತಿಳಿಸಿದ್ದಾರೆ. ಪುನೀತ್ ಅವರ ಹಠಾತ್ ನಿಧನಕ್ಕೆ ನಿರ್ದಿಷ್ಠ ಕಾರಣ ಗೊತ್ತಾಗುತ್ತಿಲ್ಲ. ಈ ಹಿಂದೆ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದರು" ಎಂದು ಡಾ. ರಮಣರಾವ್ ಹೇಳಿದ್ದಾರೆ.
PublicNext
30/10/2021 12:23 pm