ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಸಿಕೆ ಪಡೆಯಲು ಡಿಪರೆಂಟ್ ಗೆಟಪ್ ನಲ್ಲಿ ಬಂದ ಗಾಯಕ

ಕೋವಿಡ್ ಬಗ್ಗೆ ಒಂದಿಲ್ಲೊಂದು ರೀತಿಯಲ್ಲಿ ಅರಿವು ಮೂಡಿಸುವವರು ಅನೇಕರಿದ್ದಾರೆ. ಇದೀಗ ಫಿನ್ಲೆಂಡ್ ನ ಹಾರ್ಡ್ ರಾಕ್ ಬ್ಯಾಂಡ್ ಕಲಾವಿದ ಟೋಮಿ ಪೆಟ್ಟೆರಿ ಪುಟಾನ್ಸೂ ವಿಭಿನ್ನವಾಗಿ ಜಾಗೃತಿ ಮೂಡಿಸುವ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾನೆ. ಮಿಸ್ಟರ್ ಲಾರ್ಡಿ ಎಂದು ಖ್ಯಾತಿ ಪಡೆದಿರುವ ಈ ಗೀತ ರಚನಕಾರ ಹಾಗೂ ಗಾಯಕ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ವಿಭಿನ್ನ ಗೆಟಪ್ ಹಾಕಿಕೊಂಡು ಲಸಿಕಾ ಕೇಂದ್ರಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ಸದ್ಯ ಅವರ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಟೋಮಿ ಪೆಟ್ಟೆರಿ ಪುಟಾನ್ಸೂ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆಯಲು ವಿಶಿಷ್ಟವಾದ ಕಾಸ್ಟ್ಯೂಮ್ ನಲ್ಲಿ ಆಗಮಿಸಿ ಜಾಗೃತಿ ಮೂಡಿಸಿದ್ದಾರೆ. ಲಸಿಕೆ ಪಡೆದಿರುವ ಕುರಿತು ಮಾತನಾಡಿದ ಲಾರ್ಡಿ, ಅವರು ನನ್ನ ತೋಳಿಗೆ ಸೂಚಿ ಚುಚ್ಚಿದರು. ಅದಕ್ಕಾಗಿಯೇ ನಾ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

Edited By : Nirmala Aralikatti
PublicNext

PublicNext

06/08/2021 03:58 pm

Cinque Terre

88.1 K

Cinque Terre

0