ಬಾಲಿವುಡ್ ನಟ ವರುಣ್ ಧವನ್‌ಗೆ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಧೃಡಪಟ್ಟಿದೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ವರುಣ್. ಜಗ್ ಜಗ್ ಜಿಯೋ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು ವರುಣ್.
ತಮಗೆ ಪಾಸಿಟಿವ್ ಬಂದಿರುವ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ವರುಣ್ ‘ನಾನು ಲಾಕ್‌ಡೌನ್ ಬಳಿಕ ಮರಳಿ ಚಿತ್ರೀಕರಣಕ್ಕೆ ತೆರಳಿದ್ದೆ. ಈಗ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಚಿತ್ರತಂಡ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಿತ್ತು. ಆದರೂ ಈ ಕೊರೊನಾ ಸಮಯದಲ್ಲಿ ಯಾವುದೂ ನಿಶ್ಚಿತವಲ್ಲ. ಹಾಗಾಗಿ ಎಲ್ಲರೂ ಆದಷ್ಟು ಜಾಗೃತೆಯಿಂದಿರಿ. ನಾನು ಕೂಡ ಜಾಗೃತೆಯಿಂದಿರುತ್ತೇನೆ. ಬೇಗ ಗುಣಮುಖರಾಗಿ ಎಂಬ ಸಂದೇಶಗಳನ್ನು ನೋಡಿದ್ದೇನೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
PublicNext
07/12/2020 02:28 pm