ಬೆಂಗಳೂರು : ನಟಿ ಮೇಘನಾ ರಾಜ್ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೇಘನಾ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದು, ವೈದ್ಯರ ಸೂಚನೆಯಂತೆ ಹೆರಿಗೆಗಾಗಿ ನಗರದ ಕೆ.ಆರ್. ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೇಘನಾಗೆ ಇಂದು ಅಥವಾ ನಾಳೆ ಹೆರಿಗೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿರು ಅಗಲಿಕೆಯ ನೋವಿನಲ್ಲಿರುವ ಸರ್ಜಾ ಕುಟುಂಬ ಜ್ಯೂನಿಯರ್ ಸರ್ಜಾ ಆಗಮನದ ನಿರೀಕ್ಷೆಯಲ್ಲಿದೆ.
ನಿನ್ನೆಯಷ್ಟೇ ಮೇಘನಾ ಆರೋಗ್ಯ ತಪಾಸಣೆ ಮಾಡಿಕೊಂಡು ಮನೆಗೆ ಮರಳಿದ್ದರು.
ಈ ವೇಳೆ ಅಕ್ಷ ಅಸ್ಪತ್ರೆಗೆ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸಹ ಆಗಮಿಸಿದ್ದರು.
ಈಗಾಗಲೇ ಅಣ್ಣನ ಮಗುವಿಗೆ ಧ್ರುವ ಸರ್ಜಾ ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಖರೀದಿ ಮಾಡಿದ್ದಾರೆ.
ಈಗಾಗಲೇ ಆ ತೊಟ್ಟಿಲ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧ್ರುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
PublicNext
21/10/2020 01:59 pm