ಬೆಂಗಳೂರು: ರಾಜ್ಯಾದ್ಯಂತ ಇಂದು 1374 ಮಂದಿಗೆ ಸೋಂಕು ತಗುಲಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3985376ಕ್ಕೆ ಏರಿಕೆಯಾಗಿದೆ.
ಇನ್ನು ಇಂದು ಡೆಡ್ಲಿ ಸೋಂಕಿನಿಂದ ಇಂದು 3 ಸಾವು ಸಂಭವಿಸಿವೆ. ಆ ಮೂಲಕ ಈದುರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 40088ಕ್ಕೆ ತಲುಪಿದೆ. ಇಂದು ಸೋಂಕಿನಿಂದ ಸುಧಾರಿಸಿಕೊಂಡು 777 ಜನ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗುವ ಮೂಲಕ ಈವರೆಗೂ ಡಿಸ್ಜಾರ್ಜ್ ಆದವರ ಸಂಖ್ಯೆ 3937950ಕ್ಕೆ ತಲುಪಿದೆ.
ಇನ್ನು 7296 ಸಕ್ರಿಯ ಪ್ರಕರಣಗಳಿವೆ. ಹಾಗೂ ಕಳೆದ 24 ಗಂಟೆಗಳಲ್ಲಿ ಕೊರೊನಾ ಖಚಿತತೆ ಪ್ರಮಾಣ 4.86%ನಷ್ಟಿದೆ. ಹಾಗೂ ಮರಣ ಪ್ರಮಾಣ 0.21%ನಷ್ಟಿದೆ. ಇನ್ನು ಇದೇ ಅವಧಿಯಲ್ಲಿ 28270 ಜನರನ್ನು ಕೊರೊನಾ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
PublicNext
16/07/2022 09:42 pm