ಬೆಂಗಳೂರು: ರಾಜ್ಯಾದ್ಯಂತ ಕಳೆದ 24 ಗಂಟೆಗಳಲ್ಲಿ 1209 ಮಂದಿಗೆ ಸೋಂಕು ತಗುಲಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3983025 ಕ್ಕೆ ಏರಿಕೆಯಾಗಿದೆ.
ಇನ್ನು ಇಂದು ಡೆಡ್ಲಿ ಸೋಂಕಿನಿಂದ ಇಂದು ಒಂದು ಸಾವು ಸಂಭವಿಸಿದೆ. ಆ ಮೂಲಕ ಈದುರೆಗೂ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 40084 ಕ್ಕೆ ತಲುಪಿದೆ. ಇಂದು ಸೋಂಕಿನಿಂದ ಸುಧಾರಿಸಿಕೊಂಡು 1072 ಜನ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗುವ ಮೂಲಕ ಈವರೆಗೂ ಡಿಸ್ಜಾರ್ಜ್ ಆದವರ ಸಂಖ್ಯೆ 3936160ಕ್ಕೆ ತಲುಪಿದೆ.
ಇನ್ನು 6739 ಸಕ್ರಿಯ ಪ್ರಕರಣಗಳಿವೆ. ಹಾಗೂ ಕಳೆದ 24 ಗಂಟೆಗಳಲ್ಲಿ ಕೊರೊನಾ ಖಚಿತತೆ ಪ್ರಮಾಣ 4.37% ನಷ್ಟಿದೆ. ಹಾಗೂ ಮರಣ ಪ್ರಮಾಣ 0.08% ನಷ್ಟಿದೆ. ಇನ್ನು ಇದೇ ಅವಧಿಯಲ್ಲಿ 27614 ಜನರನ್ನು ಕೊರೊನಾ ಪತ್ತೆಗಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
PublicNext
14/07/2022 07:27 pm