ನವದೆಹಲಿ: ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ 196 ಕೋಟಿ ದಾಟಿದೆ. ಬರೋಬ್ಬರಿ 196.94 ಕೋಟಿ ಗುರಿಯನ್ನ ಈಗಾಗಲೇ ದಾಟಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯದ ತಾತ್ಕಾಲಿಕ ವರದಿಯ ಪ್ರಕಾರ, ಶನಿವಾರ ಬೆಳಗ್ಗೆ 7 ಗಂಟೆ ವರೆಗೆ ಭಾರತ 196 ಕೋಟಿ ಲಸಿಕಾ ಅಭಿಯಾನ ದಾಟಿ ಎಂದು ತಿಳಿಸಿದೆ.
12-14 ವರ್ಷದವರಿಗೆ ಮಾರ್ಚ್-16 ರಂದು ಲಸಿಕೆ ನೀಡಲು ಆರಂಭಿಸಲಾಗಿತ್ತು. ಇಲ್ಲಿವರೆಗೂ 3.62 ಕೋಟಿಗೂ ಹೆಚ್ಚು ಹದಿಹರಿಯದವರಿಗೆ ಮೊದಲ ಡೋಸ್ ಹಾಗೂ 2,23,36,175 ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
PublicNext
25/06/2022 03:50 pm