ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳದಲ್ಲೂ 'ಮಾಸ್ಕ್' ಕಡ್ಡಾಯ ಆದೇಶ ಜಾರಿ

ಕೇರಳ: ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿಯೇ ಬಹುತೇಕ ರಾಜ್ಯಗಳೂ ಮಾಸ್ಕ ಕಡ್ಡಾಯಗೊಳಿಸುತ್ತಿವೆ.ಕರ್ನಾಟಕದಲ್ಲೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.ಅದರಂತೆ ಪಕ್ಕದ ಕೇರಳ ರಾಜ್ಯವೂ ಮಾಸ್ಕ್ ಕಡ್ಡಾಯದ ಆದೇಶ ಹೊರಡಿಸಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಈ ಒಂದು ಆದೇಶವನ್ನ ಬುಧವಾರ ಹೊರಡಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಕೂಡ ವಿಧಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಕೋವಿಡ್ ನಿಯಂತ್ರಿಸಲೆಂದೇ ಇಂದು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ಮಾಡಿದರು. ಅದರಲ್ಲಿ ಮಾಸ್ಕ ಕಡ್ಡಾಯದ ಸೂಚನೆಯನ್ನೂ ನೀಡಿದರು. ಆ ಹಿನ್ನೆಲೆಯಲ್ಲಿಯೇ ಕೇರಳ ಸರ್ಕಾರ ಈಗ ಮಾಸ್ಕ ಕಡ್ಡಾಯದ ಆದೇಶ ಹೊರಡಿಸಿದೆ.

Edited By :
PublicNext

PublicNext

27/04/2022 03:24 pm

Cinque Terre

35.79 K

Cinque Terre

0