ನವದೆಹಲಿ: ಕೊರೊನಾ ಸೋಂಕು ದೆಹಲಿಯಲ್ಲಿ ಅತಿ ಹೆಚ್ಚಾಗಿದೆ. ಇದರ ಮಧ್ಯೆನೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೂಸ್ಟರ್ ಡೋಸ್ ಲಸಿಕೆಯನ್ನ ಉಚಿತವಾಗಿಯೇ ನೀಡುವುದಾಗಿ ಘೋಷಿಸಿದ್ದಾರೆ.
ದೆಹಲಿ ಸರ್ಕಾರದಡಿಯ ಎಲ್ಲ ಆಸ್ಪತ್ರೆಯಲ್ಲೂ 18 ರಿಂದ 59 ವರ್ಷದೊಗಳಗಿನ ಅರ್ಹ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಉಚಿತವಾಗಿಯೇ ನೀಡಲು ನಿರ್ಧರಿಸಲಾಗಿದೆ.
ಕಳೆದ ಒಂದು ವಾರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಲೇ ಇದೆ. ಕೇವಲ 100 ಆಸು-ಪಾಸು ಇದ್ದ ಕೋವಿಡ್ ಸೋಂಕು ಬುಧವಾರದ ಹೊತ್ತಿಗೆ 1000 ಗಡಿ ದಾಟಿದೆ.
PublicNext
22/04/2022 10:39 am