ಈಗಾಗಲೇ ಎರಡು ಡೋಸ್ ಲಸಿಕೆ ಪಡೆದ 18 ವರ್ಷ ಮೇಲ್ಪಟ್ಟವರಿಗೆ ಏ.10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕೊರೊನಾ ಬೂಸ್ಟರ್ ಡೋಸ್ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಿಸಿದೆ.ಈ ಕುರಿತು ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಕೊರೊನಾ ಲಸಿಕೆ 2ನೇ ಡೋಸ್ ಪಡೆದು 9 ತಿಂಗಳ ನಂತರವಷ್ಟೇ 3ನೇ ಡೋಸ್ ಅಂದರೆ ಬೂಸ್ಟರ್ ಡೋಸ್ ನೀಡುತ್ತಾರೆ. ಏಪ್ರಿಲ್ 10 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅನ್ನು ಕೇಂದ್ರ ಸರ್ಕಾರ ಘೋಷಿಸಿತು.
PublicNext
08/04/2022 09:03 pm