ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋವಿಡ್ 4ನೇ ಅಲೆ ಬಂದರೂ ಭಾರತೀಯರು ಭಯಪಡಬೇಕಿಲ್ಲ

ನವದೆಹಲಿ:ಕೋವಿಡ್ ಅಲೆ ಚೀನಾದಲ್ಲಿ ಭೀಕರತೆ ಸೃಷ್ಟಿಸಿದೆ.ಇದರಿಂದ ಚೀನಾ ದೇಶದ ಸ್ಥಿತಿ ಗಂಭೀರವಾಗಿದೆ. ಇದರಿಂದ ಭಾರತದಲ್ಲೂ ಸಣ್ಣ ಆತಂಕ ಇದೆ. ಕೋವಿಡ್ ನಾಲ್ಕನೆ ಬಂದು ಭಾರತಕ್ಕೆ ಅಪ್ಪಳ್ಳಿಸಲಿದೆ ಅನ್ನೋ ಆತಂಕವೇ ಈಗ ಅತಿ ಹೆಚ್ಚಾಗಿದೆ.

ನಿಜ, ಆದರೆ, ನಾಲ್ಕೆ ಅಲೆ ಭಾರತಕ್ಕೆ ಬಂದ್ರೂ ಏನೂ ತೊಂದರೆ ಇಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಅಂತಲೇ ತಜ್ಞರು ಈಗಲೇ ಅಭಿಪ್ರಾಯ ಪಟ್ಟಿದ್ದಾರೆ.

ನಾಲ್ಕನೆ ಅಲೆಯ ತೀವ್ರತೆ ಅಷ್ಟೇನೂ ಇರೋದಿಲ್ಲ. ಹಾಗೇನೆ ಈಗ ಸೋಂಕಿನ ಸಂಖ್ಯೆ ಸಾವಿನ ಸಂಖ್ಯೆ ಎರಡೂ ಕಡಿಮೆ ಆಗಿವೆ. ಹಾಗಾಗಿಯೇ ಮಾಸ್ಕ್ ಕಡ್ಡಾಯ ನಿಯಮವನ್ನೂ ತೆರೆವುಗೊಳಿಸಬಹುದು ಅಂತಲೂ ತಜ್ಞರು ಹೇಳಿದ್ದಾರೆ.

ಈಗಾಗಲೇ 1,000 ಹೆಚ್ಚು ರೂಪಾಂತರಿ ಸೋಂಕು ಬಂದಿವೆ. ಆದರೆ ಇವುಗಳಲ್ಲಿ ಕೇವಲ ಐದು ಮಾತ್ರ ಅಪಾಯಕಾರಿ ಆಗಿವೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಾಂಕ್ರಾಮಿಕ ರೋಗ ತಜ್ಞ ಸಂಜಯ್ ರಾಯ್ ಹೇಳಿಕೊಂಡಿದ್ದಾರೆ.

Edited By :
PublicNext

PublicNext

21/03/2022 10:55 am

Cinque Terre

19.7 K

Cinque Terre

2