ಟೋಕಿಯೋ: ಕೊರೊನಾ ರೂಪಾಂತರಿ ವೈರಸ್ ಒಮಿಕ್ರಾನ್ ಜನರ ನೆಮ್ಮದಿ ಕಸಿಯುವಲ್ಲಿ ಸದ್ಯ ಮುಂಚೂಣಿಯಲ್ಲಿದೆ. ಈ ಡೆಡ್ಲಿ ವೈರಸ್ ಚರ್ಮದ ಮೇಲೆ 21 ಗಂಟೆ, ಪ್ಲಾಸ್ಟಿಕ್ ಮೇಲೆ 8 ದಿನಕ್ಕೂ ಹೆಚ್ಚು ಕಾಲ ಬದುಕಬಲ್ಲದು ಎಂದು ಅಧ್ಯಯವೊಂದು ಹೇಳಿದೆ. ಇತರೆ ಕೋವಿಡ್ 19 ತಳಿಗಳಿಗಿಂತ ಒಮಿಕ್ರಾನ್ ಹೆಚ್ಚು ವೇಗವಾಗಿ ಪ್ರಸರಣ ಹೊಂದಲು ಇದೂ ಒಂದು ಕಾರಣ ಇರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ನ ಕ್ಯೋಟೊ ಪ್ರಿಫೆಕ್ಚುವಲ್ ಯುನಿವರ್ಸಿಟಿ ಆಫ್ ಮೆಡಿಸಿನ್ ನ ಸಂಶೋಧಕರು ವುಹಾನ್ ನಲ್ಲಿ ಮೊದಲು ಪತ್ತೆಯಾದ ಸಾರ್ಸ್-ಕೋವ್-2 ತಳಿ ಹಾಗೂ ಇತರೆ ಎಲ್ಲ ರೂಪಾಂತರಗಳ ನಡುವಿನ ವೈರಲ್ ಪರಿಸರೀಯ ಸ್ಥಿರತೆಯ ವ್ಯತ್ಯಾಸವನ್ನು ವಿಶ್ಲೇಷಣೆ ಮಾಡಿದ್ದಾರೆ.
ಬಯೋಆರ್ ಕ್ಸಿವ್ ಎಂಬ ವೈದ್ಯಕೀಯ ಪತ್ರಿಕೆಯಲ್ಲಿ ಪರಾಮರ್ಶನಾ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದೆ. ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಗಳು ಮೂಲ ಕೊರೊನಾ ವೈರಸ್ ಗಿಂತಲೂ ಪ್ಲಾಸ್ಟಿಕ್ ಹಾಗೂ ಚರ್ಮದ ಮೇಲ್ಮೈ ಮೇಲೆ ಎರಡು ಪಟ್ಟು ಹೆಚ್ಚು ಕಾಲ ಬದುಕಬಲ್ಲವು ಎಂದು ಸಂಶೋಧಕರು ತಿಳಿಸಿದ್ಧಾರೆ.
ಪ್ಲಾಸ್ಟಿಕ್ ಮೇಲೆ ಒಮಿಕ್ರಾನ್ ತಳಿ 193.5 ಗಂಟೆ ಜೀವಂತ ಇರಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ. ಚರ್ಮದ ಮೇಲೆ 21.1 ಗಂಟೆ ಇರಬಲ್ಲದು ಎಂದು ತಿಳಿಸಿದ್ದಾರೆ.
PublicNext
27/01/2022 12:50 pm