ನವದೆಹಲಿ: ದೇಶದಾದ್ಯಂತ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಇಂದು ಎರಡು ಲಕ್ಷದ ಸಮೀಪಕ್ಕೆ ತಲುಪಿದೆ. ಬುಧವಾರ 24 ಗಂಟೆಗಳ ಅಂತರದಲ್ಲಿ 1,94,720 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 442 ಮಂದಿ ಮೃತಪಟ್ಟಿದ್ದಾರೆ ಹಾಗೂ 60,405 ಮಂದಿ ಗುಣಮುಖರಾಗಿದ್ದಾರೆ.
ಕೋವಿಡ್ ಪಾಸಿಟಿವಿಟಿ ದರವು ಶೇಕಡ 11.05ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 9,55,319ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 4,868 ಒಮಿಕ್ರಾನ್ ಪ್ರಕರಣಗಳು ಇರುವುದಾಗಿ ಕೇಂದ್ರ ಆರೋಗ್ಯ ಇಲಾಖೆಯ ಅಪ್‌ಡೇಟ್‌ನಿಂದ ತಿಳಿದು ಬಂದಿದೆ.
ನಿನ್ನೆಗೆ ಹೋಲಿಸಿದರೆ, ಇಂದು 26,657 (ಶೇ 15.8) ಪ್ರಕರಣಗಳು ಏರಿಕೆಯಾಗಿವೆ. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3.60 ಕೋಟಿ ದಾಟಿದ್ದು, ಈ ಪೈಕಿ ಸೋಂಕಿನಿಂದ 4,84,655 ಮಂದಿ ಸಾವನ್ನಪ್ಪಿದ್ದಾರೆ.
PublicNext
12/01/2022 12:20 pm