ನವದೆಹಲಿ: ಕೊರೊನಾ ಸೋಂಕಿತರ ಸಂಪರ್ಕಿತರು ಅಪಾಯ ಎಂದು ಗುರುತಿಸಿದ ಹೊರತಾಗಿ ಅವರನ್ನು ಪರೀಕ್ಷೆಗ ಒಳಪಡಿಸುವ ಅಗತ್ಯತೆ ಇಲ್ಲ ಎಂದು ಕೇಂದ್ರದ ಉನ್ನತ ವೈದ್ಯಕೀಯ ಸಂಸ್ಥೆಯು ಇಂದು ನೀಡಿದ ಹೊಸ ಸಲಹೆಯಲ್ಲಿ ತಿಳಿಸಿದೆ.
ಜಿನೋಮ್ ಅನುಕ್ರಮವನ್ನು ಕಣ್ಗಾವಲು ಉದ್ದೇಶಗಳಿಗಾಗಿ ಮಾಡಲಾಗುತ್ತದೆ ಮತ್ತು ಚಿಕಿತ್ಸೆಯ ಉದ್ದೇಶಗಳಿಗಾಗಿ ಕೈಗೊಳ್ಳಬೇಕಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. ಇನ್ಸಾಸಿಗ್ ಶಿಫಾರಸುಗಳ ಪ್ರಕಾರ, ಧನಾತ್ಮಕ ಮಾದರಿಗಳ ಉಪಸಮೂಹದಲ್ಲಿ ಮಾತ್ರ ಜೀನೋಮ್ ಅನುಕ್ರಮವನ್ನ ಮಾಡಬೇಕಾಗಿದೆ ಎಂದು ಸಂಸ್ಥೆ ಹೇಳಿದೆ.
PublicNext
10/01/2022 10:42 pm