ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಒಂದೇ ದಿನ 14 ಸಾವಿರ ಕೊರೊನಾ ಕೇಸ್ ಬರುವ ಸಾಧ್ಯತೆ ಇದೆ. ಆದರೂ ಯಾವುದೇ ಲಾಕ್ ಡೌನ್ ಪ್ಲಾನ್ ಇಲ್ಲವೇ ಇಲ್ಲ.ಹೀಗಂತ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ಕೋವಿಡ್ ಮಹಾಮಾರಿ ಇಡೀ ದೇಶವನ್ನೆ ಮತ್ತೆ ಕಾಡ್ತಾಯಿದೆ. ವರ್ಷಕೊಮ್ಮೆ ಇದು ಈಗ ಕಾಮನ್ ಆಗಿ ಬಿಟ್ಟಿದೆ.ಅದರಂತೆ ಈ ವರ್ಷವೂ ಕೊರೊನಾ ಕೇಸ್ ಹೆಚ್ಚಾಗ್ತಾನೇ ಇವೆ. ದೇಶದ ಕ್ಯಾಪಿಟಲ್ ಸಿಟಿ ದೆಹಲಿಯಲ್ಲಿ ಇವತ್ತು ಒಂದೇ ದಿನಕ್ಕೆಎ 14 ಸಾವಿರ ಕೊರೊನಾ ಕೇಸ್ ಪತ್ತೆ ಆಗೋ ಸಾಧ್ಯತೆ ಇದೆ.
ಆದರೆ ಲಾಕ್ ಡೌನ್ ಮಾಡುವ ಯಾವುದೇ ಪ್ಲಾನ್ ಇಲ್ಲವೇ ಇಲ್ಲ ಅಂತಲೇ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈಗಾಗಲೇ ಹೇಳಿಬಿಟ್ಟಿದ್ದಾರೆ. ಅಂದ್ಹಾಗೆ ಕಳೆದ 8 ತಿಂಗಳಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಕೊರೊನಾ ಕೇಸ್ ಪತ್ತೆ ಆಗ್ತಿರೋದು ಆತಂಕಕಾರಿನೇ ಆಗಿದೆ.
PublicNext
06/01/2022 03:17 pm