ಮುಂಬೈ: ನಗರದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿವೆ. ಸೋಮುವಾರ ಒಂದೇ ದಿನ ಇಲ್ಲಿ 8 ಸಾವಿರ ಕೊರೊನಾ ಪ್ರಕರಣ ಪತ್ತೆ ಆಗಿವೆ. ದಿನವೂ ಇದು ಏರುತ್ತಲೇ 20 ಸಾವಿರ ಗಡಿ ತಲುಪಿದರೆ, ಇಡೀ ಮುಂಬೈಯಲ್ಲಿ ಕಠಿಣ ಲಾಕ್ ಡೌನ್ ಘೋಷಿಸಲಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಹೇಳಿದ್ದಾರೆ.
ಕೊರೊನಾ ಕೇಸ್ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿಯೇ ಇವತ್ತು ಮೇಯರ್ ಕಿಶೋರಿ ಪೆಡ್ನೇಕರ್ ಮುಂಬೈಯಲ್ಲಿ ಸುದ್ದಿಗೋಷ್ಠಿ ಮಾಡಿದ್ದಾರೆ. ಈಗಾಗಲೇ ಇಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿವೆ. ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆ ಆಗಿವೆ.ಜೊತೆಗೆ ಒಮಿಕ್ರಾನ್ ಕೇಸ್ ಕೂಡ ಇವೆ ಎಂದು ವಿವರಿಸಿದ್ದಾರೆ ಕಿಶೋರಿ ಪೆಡ್ನೇಕರ್.
ಒಂದು ಅಪಾರ್ಟ್‌ಮೆಂಟ್ ನಲ್ಲಿ ಒಂದು ವೇಲೆ ಶೇಕಡ 20% ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆ ಆದರೆ, ಆ ಅಪಾರ್ಟ್‌ಮೆಂಟ್ ಅನ್ನ ಸೀಲ್ ಡೌನ್ ಮಾಡಲಾಗುವುದು ಎಂದೂ ಕೂಡ ತಿಳಿಸಿದ್ದಾರೆ ಮೇಯರ್ ಕಿಶೋರಿ ಪೆಡ್ನೇಕರ್.
PublicNext
04/01/2022 03:15 pm