ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ಅಷ್ಟೊಂದು ಸೇಫ್ ಅಲ್ಲ ಅಂತಾರೆ ಅಮೆರಿಕದ ತಜ್ಞರು

ಪ್ರಧಾನಿ ನರೇಂದ್ರ ಮೋದಿ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾವೈರಸ್ ವಿರುದ್ಧದ ಲಸಿಕೆಗಳನ್ನುಜನವರಿ 3 ರಿಂದ ನೀಡಲಾಗುತ್ತದೆ ಎಂದು ಘೋಷಿಸಿದ್ದು ಹೆಚ್ಚುವರಿಯಾಗಿ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಅನ್ನು 12 ರಿಂದ 18 ವಯಸ್ಸಿನ ನಡುವಿನ ಮಕ್ಕಳಿಗೆ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದೆ.

ಈ ಸಮಯದಲ್ಲಿ ಅನೇಕ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಇನ್ನು ಕೆಲವರು ಪೋಷಕರು ವ್ಯಾಕ್ಸಿನ್‌ನಿಂದ ಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಎಂದು ಆತಂಕಕ್ಕೊಳಗಾಗಿದ್ದಾರೆ. ಕೊರೊನಾ ವಿರುದ್ಧ ಮಕ್ಕಳಿಗೆ ಲಸಿಕೆ ಹಾಕಬೇಕೇ ಅಥವಾ ಬೇಡವೇ ಎಂಬ ಚರ್ಚೆಯು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ನಡೆಯುತ್ತಿದೆ. ಇತ್ತೀಚಿನ ಸುದ್ದಿಯ ಪ್ರಕಾರ ಯುಎಸ್ ವೈರಾಲಜಿಸ್ಟ್ ಮತ್ತು ಇಮ್ಯುನಾಲಜಿಸ್ಟ್ ಡಾ. ರಾಬರ್ಟ್ ಮಲೋನ್ ಕೊರೊನಾ ಲಸಿಕೆಗಳು ಮಕ್ಕಳಿಗೆ ಸುರಕ್ಷಿತವಾಗಿಲ್ಲದಿರಬಹುದು ಎಂಬ ಹೇಳಿಕೆ ನೀಡಿದ್ದಾರೆ. ಇದರಿಂದ ಪೋಷಕರು ಪ್ರತಿಯೊಬ್ಬರೂ ಆತಂಕಕ್ಕೊಳಗಾಗಿದ್ದಾರೆ.

ಮಕ್ಕಳಿಗೆ ಲಸಿಕೆಗಳನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿರುವ ಸಮಯದಲ್ಲಿಯೇ ರಾಬರ್ಟ್ ಮಲೋನ್ ಹೇಳಿಕೆಗಳು ಸಂಚಲನವನ್ನುಂಟು ಮಾಡಿದ್ದು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಓಮೈಕ್ರಾನ್ ಹಬ್ಬುತ್ತಿರುವ ನಡುವೆಯೇ ಭಾರತ ಇತ್ತೀಚೆಗೆ 15 ರಿಂದ 18ರ ವಯಸ್ಸಿನ ನಡುವಿನ ಮಕ್ಕಳಿಗೆ ಲಸಿಕೆ ನೀಡುವುದಾಗಿ ಘೋಷಿಸಿದೆ. ದೇಶದಲ್ಲಿರುವ ಹಲವಾರು ವೈದ್ಯರು ಹಾಗೂ ಪರಿಣಿತರು ಮಕ್ಕಳಿಗೆ ಲಸಿಕೆ ಹಾಕುವುದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಬೇಡಿಕೆಯನ್ನಿಟ್ಟಿದ್ದು ಕೊರೋನಾ ವೈರಸ್ ವಿರುದ್ಧ ಮಕ್ಕಳು ಸದೃಢವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದಾರೆ ಎಂದು ಇನ್ನು ಕೆಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
PublicNext

PublicNext

31/12/2021 11:01 pm

Cinque Terre

56.33 K

Cinque Terre

2