ರಾಜಸ್ಥಾನ: ಕೋವಿಡ್ ಕಾಡುತ್ತಲೇ ಇದೆ. ಒಮಿಕ್ರಾನ್ ಅದನ್ನ ಮೀರೋ ಹಾಗಿದೆ.ಇದನ್ನ ಗಮನದಲ್ಲಿಟ್ಟುಕೊಂಡೇ ಆರೋಗ್ಯ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಸೂಕ್ತ ಉದಾಹರಣೆ ಇಲ್ಲಿದೆ. ನೋಡಿ
ಕೇಂದ್ರ ಸರ್ಕಾರ ಹರ್ ಘರ್ ದಸ್ತಕ್ ಅಭಿಯಾನ ಆರಂಭಿಸಿದೆ. ಮನೆ ಮನೆಗೂ ತೆರಳಿ ಲಸಿಕೆ ಕೊಡುವುದೇ ಇದರ ಉದ್ದೇಶ. ಅದನ್ನ ಸರಿಯಾಗಿಯೇ ಪಾಲಿಸಿರೋ ರಾಜಸ್ಥಾನದ ಕಾರ್ಯಕರ್ತೆ ಇಲ್ಲಿಯ ಬಾರ್ಮರ್ ಹೆಸರಿನ ಮರಳುಗಾಡಿನಲ್ಲಿ ಒಂಟೆ ಏರಿ ಬಂದು ಲಸಿಕೆ ಹಾಕಿದ್ದಾರೆ. ಮರಳುಗಾಡಿನಲ್ಲಿ ಈ ತರ ಕೆಲಸ ಮಾಡ್ತಿರೋದು ಕಾರ್ಯಕರ್ತೆಯ ಈ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೂ ಈ ಕೆಲಸ ಮೆಚ್ಚಿ ಟ್ವಿಟರ್ ನಲ್ಲಿ ಈ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
PublicNext
25/12/2021 01:51 pm