ದೇವನಹಳ್ಳಿ:ವಿದೇಶದಿಂದ ಬೆಂಗಳೂರಿಗೆ ಆಗಮಿಸಿ 10 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇವರಲ್ಲಿ ಮಹಿಳೆಯರು ಪುರುಷು ಮತ್ತು ಮಕ್ಕಳೂ ಇದ್ದಾರೆ. ಅವರ ವಿವರ ಇಂತಿದೆ. ನೋಡಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಫ್ರಾಂಕ್‌ಫರ್ಟ್ ನಿಂದ ಆಗಮಿಸಿದ 40 ವರ್ಷದ ಪುರುಷ, 30 ವರ್ಷದ ಮಹಿಳೆ, 33 ವರ್ಷದ ಪುರುಷ, 31 ವರ್ಷದ ಪುರುಷ ಮತ್ತು 29 ವರ್ಷದ ಪುರುಷ ಪ್ರಯಾಣಿಕರಲ್ಲಿ, ಪ್ಯಾರಿಸ್ ನಿಂದ ಆಗಮಿಸಿದ 33 ವರ್ಷದ ಪುರುಷ, 25 ವರ್ಷದ ಮಹಿಳೆ ಮತ್ತು 19 ವರ್ಷದ ಯುವಕನಲ್ಲಿ ಹಾಗೂ ಕತಾರ್ ನಿಂದ ಆಗಮಿಸಿದ 35 ವರ್ಷದ ಮಹಿಳಾ ಮತ್ತು 10 ವರ್ಷದ ಬಾಲಕಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.
ಎಲ್ಲಾ 10 ಕೋವಿಡ್ ಸೋಂಕಿತ ಪ್ರಯಾಣಿಕರನ್ನು ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
25/12/2021 10:58 am