ಬೆಂಗಳೂರು: ಇಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಯಲ್ಲಿ ಒಮಿಕ್ರಾನ್ ಪತ್ತೆಯಾಗಿರುವುದಾಗಿ
ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಮಾಹಿತಿ ನೀಡಿದ್ದಾರೆ.
ಯು.ಕೆ ಇಂದ ಬಂದ 26 ವರ್ಷದ ಮಹಿಳೆಯಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು, ಆಕೆಯನ್ನು ಏರ್ ಪೋರ್ಟ್ ನಿಂದ ಕರೆದುಕೊಂಡು ಬರಲು ಹೋಗಿದ್ದ ಇಡೀ ಫ್ಯಾಮಿಲಿಗೂ ಒಮಿಕ್ರಾನ್ ಒಕ್ಕರಿಸಿದೆ.ಸೆಕೆಂಡರಿ ಕಾಂಟ್ಯಾಕ್ಟ್ ಹೊಂದಿದ್ದ 10 ಮಂದಿಯಲ್ಲಿ ನೆಗೆಟಿವ್ ಕಾಣಿಸಿಕೊಂಡಿದೆ. ಇಡೀ ಕುಟುಂಬವನ್ನು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಸೋಂಕಿತರಲ್ಲಿ ಕೋವಿಡ್ ನ ಸಾಧಾರಣ ಲಕ್ಷಣಗಳು ಮಾತ್ರ ಇದೆ,ಯಾವುದೇ ತೀವ್ರ ಲಕ್ಷಣಗಳು ಪತ್ತೆಯಾಗಿಲ್ಲ, ಡಿಸೆಂಬರ್ 12 ರಂದು ಯು.ಕೆ ಇಂದ ಬಂದಿದ್ದ ಮಹಿಳೆಯು ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಬಂದಿದ್ದರು, ಏರ್ ಪೋರ್ಟ್ ನಲ್ಲೂ ಪರೀಕ್ಷೆ ಮಾಡಿದಾಗೆ ನೆಗೆಟಿವ್ ಬಂದಿತ್ತು ಆದರೆ ಮನೆಗೆ ಬಂದು ಎರಡು ದಿನದಲ್ಲಿ ಕೋವಿಡ್ ಲಕ್ಷಣಗಳು ಈಕೆಯಲ್ಲಿ ಕಾಣಿಸಿಕೊಂಡಿದೆ, ಬಳಿಕ ಟೆಸ್ಟ್ ಮಾಡಿದಾಗ ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ.
ಅಪಾರ್ಟ್ ಮೆಂಟ್ ನಲ್ಲಿ ಸೋಂಕಿತರಿದ್ದ ಫ್ಲಾಟ್ ಅನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ.
PublicNext
23/12/2021 05:18 pm