ನವದೆಹಲಿ: ಹೆಮ್ಮಾರಿ ಸೋಂಕು ಕೊರೊನಾ ನಂತರ ಜನರ ನೆಮ್ಮದಿ ಕಸಿಯುತ್ತಿದೆ ರೂಪಾಂತರಿ ವೈರಸ್ ಒಮಿಕ್ರಾನ್. ಇದುವರೆಗೂ ದೇಶದಲ್ಲಿ ಒಟ್ಟು 145 ಕೇಸ್ ಗಳು ಪತ್ತೆಯಾಗಿದೆ.
ಇತ್ತೀಚೆಗೆ ಇಂಗ್ಲೆಂಡ್ ನಿಂದ ಗುಜರಾತ್ ಗೆ ಆಗಮಿಸಿದ 45 ವರ್ಷದ ಎನ್ ಆರ್ ಐ ಮತ್ತು ಒಬ್ಬ ಹುಡುಗನಲ್ಲಿ ರೂಪಾಂತರಿ ಒಮಿಕ್ರಾನ್ ವೈರಸ್ ಕಂಡು ಬಂದ ನಂತರ ಭಾರತದ ಒಮಿಕ್ರಾನ್ ಎಣಿಕೆ ಭಾನುವಾರ 145 ಕ್ಕೆ ಏರಿದೆ.
ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿದ್ದು, ಮಹಾರಾಷ್ಟ್ರ (48), ದೆಹಲಿ (22), ರಾಜಸ್ಥಾನ (17) ಮತ್ತು ಕರ್ನಾಟಕ (14), ತೆಲಂಗಾಣ (20), ಗುಜರಾತ್ (9), ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಕೇರಳ (11), ಆಂಧ್ರಪ್ರದೇಶ (1), ಚಂಡೀಗಢ (1), ತಮಿಳುನಾಡು (1) ಮತ್ತು ಪಶ್ಚಿಮ ಬಂಗಾಳ (1) ಪ್ರಕರಣಗಳು ವರದಿಯಾಗಿವೆ.
PublicNext
19/12/2021 10:43 pm