ಬಿಹಾರ: ಕೋವಿಡ್ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ತಪ್ಪು ಗ್ರಹಿಕೆ ಹೋಗಲಾಡಿಸಲು ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟ್ರೂ ಕೆಲವೆಡೆ ಜನರಿಗೆ ಇನ್ನೂ ಅದ್ರ ಬಗ್ಗೆ ಭಯ ಹೋಗಿಲ್ಲ. ವ್ಯಾಕ್ಸಿನ್ ತಗೊಂಡ್ರೆ ಜೀವವೇ ಹೋಗಿಬಿಡುತ್ತೆ ಅನ್ನೋ ಭ್ರಮೆಯಲ್ಲಿರೋ ಜನರ ಮನವೊಲಿಸಲು ವೈದ್ಯಕೀಯ ಸಿಬ್ಬಂದಿ ಎಷ್ಟೆಲ್ಲಾ ಹರಸಾಹಸ ಪಡ್ತಿದ್ದಾರೆ ನೋಡಿ. ಇಲ್ಲೊಬ್ಬ ವ್ಯಕ್ತಿಗೆ ವ್ಯಾಕ್ಸಿನ್ ಕೊಡಲು ನಾಲ್ಕು ಜನ ಸಿಬ್ಬಂದಿ ಎಷ್ಟೆಲ್ಲಾ ಕಷ್ಟಪಡ್ತಿದ್ದಾರೆ ನೋಡಿ. ಅಷ್ಟಕ್ಕೂ ಈ ದೃಶ್ಯ ಕಂಡುಬಂದದ್ದು ಬಿಹಾರದಲ್ಲಿ. ವ್ಯಾಕ್ಸಿನ್ ಪಡೆಯಲು ನಿರಾಕರಿಸಿದ ವ್ಯಕ್ತಿಗೆ ಎಷ್ಟೇ ತಿಳುವಳಿಕೆ ಹೇಳಿದರೂ ಆತ ಕೇಳಲೇ ಇಲ್ಲ. ಕೊನೆಗೆ ಅವನನ್ನ ಬಲವಂತವಾಗಿ ಹಿಡಿದುಕೊಂಡು ವ್ಯಾಕ್ಸಿನ್ ನೀಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಇದ್ರ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆಯುತ್ತಿವೆ.
PublicNext
15/12/2021 01:08 pm